Corona Virus

ಕೊರೋನಾ ವೈರಸ್: ಕೋವಿಡ್ 19 ಸೋಂಕು ಹೆಚ್ಚಳ ಹಿನ್ನಲೆ, ಕಾಶ್ಮೀರದ 20 ಗ್ರಾಮಗಳು ರೆಡ್ ಜೋನ್ ಆಗಿ ಘೋಷಣೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದ ಸುಮಾರು 20 ಗ್ರಾಮಗಳನ್ನು ರೆಡ್ ಜೋನ್ ಆಗಿ ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 72 ಮಂದಿಗೆ ಕೊರೋನಾ ವೈರಸ್, ಸೋಂಕಿತರ ಸಂಖ್ಯೆ 302ಕ್ಕೆ ಏರಿಕೆ
ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು, ಇಂದು ಒಂದೇ ದಿನ ಬರೊಬ್ಬರಿ 72 ಮಂದಿಗೆ ವೈರಸ್ ಸೋಂಕು ತುಗುಲಿದೆ.

ಕೊರೋನಾ ವೈರಸ್: ಲಾಕ್ ಡೌನ್ ಹಿನ್ನಲೆ, ವಲಸೆ ಕಾರ್ಮಿಕರನ್ನು ಮದುವೆ ಹಾಲ್ ಗಳಿಗೆ ರವಾನಿಸಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಕೊರೋನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತವರು ಜಿಲ್ಲೆಗಳಿಗೆ ತೆರಳಲು ಹವಣಿಸುತ್ತಿರುವ ಎಲ್ಲ ವಲಸೆ ಕಾರ್ಮಿಕರನ್ನು ಮದುವೆ ಮಂಟಪಗಳಿಗೆ ರವಾನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ ದಲೈಲಾಮ ಬೆಂಬಲ, ಪ್ರಧಾನಿ ಮೋದಿ ಕಾರ್ಯ ಶ್ಲಾಘಿಸಿದ ಬೌದ್ಧ ಧಾರ್ಮಿಕ ಗುರು!
ಇಡೀ ವಿಶ್ವವನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟವನ್ನು ಖ್ಯಾತ ಬೌದ್ಧ ಧಾರ್ಮಿಕ ಗುರು ದಲೈಲಾಮಾ ಶ್ಲಾಘಿಸಿದ್ದು, ಪಿಎಂ ಕೇರ್ಸ್ ಫಂಡ್ ಗೆ ತಾವೂ ಕೂಡ ತಮ್ಮ ಕೈಲಾದ ಧನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಬಿಎಸ್ಎನ್ಎಲ್ನಿಂದ ವಿಶೇಷ ಕೊಡುಗೆ, ಗ್ರಾಹಕರಿಗೆ ಬಂಪರ್!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ, ಲಾಕ್ಡೌನ್ ಆದ ಮಾರ್ಚ್ 22 ರಿಂದ ಏಪ್ರಿಲ್ 20ರವರೆಗೆ ವ್ಯಾಲಿಡಿಟಿ ಅವಧಿ ಮೀರಿದ ಮತ್ತು ವ್ಯಾಲಿಡಿಟಿ ವಿಸ್ತರಣೆ ರೀಚಾರ್ಜ್ ಮಾಡಲು ಸಾಧ್ಯವಾಗದ ಎಲ್ಲಾ ಮೊಬೈಲ್ ಚಂದಾದಾರರಿಗೆ ಉಚಿತವಾಗಿ ವ್ಯಾಲಿಡಿಟಿ ಅವಧಿಯನ್ನು ಸೋಮವಾರ ವಿಸ್ತರಿಸಿದೆ.

ಕೊರೋನ ವೈರಸ್ ಹರಡುವಿಕೆ 3ನೇ ಹಂತಕ್ಕೆ ಕಾಲಿಡುತ್ತಿದೆ, ಹೆಚ್ಚಿನ ಪರೀಕ್ಷೆಗಳು ಅಗತ್ಯ: ಕಾಂಗ್ರೆಸ್
ಕೊರೊನಾವೈರಸ್ನ ದೃಢಪಟ್ಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶವು ಮೂರನೇ ಹಂತದತ್ತ ಸಾಗುತ್ತಿದ್ದು, ಸಾಧ್ಯವಾದಷ್ಟು ಹೆಚ್ಚು ಪರೀಕ್ಷೆಗಳನ್ನು ನಡೆಸುವುದರಿಂದ ಇದನ್ನು ಪರಿಣಾಮಕಾರಿಯಾಗಿ ಎದುರಿಸ ಬಹುದು ಎಂದು ಕಾಂಗ್ರೆಸ್ ಹೇಳಿದೆ.

ಕೊರೋನಾ ವೈರಸ್ ನಿಂದ ಎಲ್ಲರಿಗೂ ಕಷ್ಟಕಾಲ, ಕುಡುಕರಿಗಂತೂ ತೀವ್ರ ಬರಗಾಲ!
ಕೊರೋನಾ ವೈರಸ್ ಸಂಬಂಧ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ರಾಜ್ಯದಲ್ಲಿ ಮದ್ಯ ಪೂರೈಕೆ ಸ್ಥಗಿತಗೊಂಡಿದೆ. ಇದು ಮದ್ಯಪಾನಿಗಳಿಗೆ ಬೇಸರ ತರಿಸಿದ್ದಂತೂ ಹೌದು.

ಕುರಿಗಳಿಂದ ಕೊರೋನಾ ಸೋಂಕು ಹರಡುತ್ತದೆ ಎಂಬುದು ತಪ್ಪು ಕಲ್ಪನೆ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ: ಸಿದ್ದರಾಮಯ್ಯ
ಕುರಿಗಳಿಂದ ಕೊರೋನಾ ಸೋಂಕು ತಗುಲುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹಳ್ಳಿಗಳಲ್ಲಿ ಕುರಿಗಳಿಗೆ ಹಿಂಸೆ ನೀಡುವುದು, ಕುರಿಗಾಹಿಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಗಮನಕ್ಕೆ ಬಂದಿದೆ, ಈ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೊರೋನಾ ವೈರಸ್ ವಿಶ್ವದಲ್ಲಿ 11 ದಶಲಕ್ಷ ಜನರು ಬಡತನಕ್ಕೆ ತಳ್ಳಬಹುದು:ವಿಶ್ವಬ್ಯಾಂಕ್ ವರದಿ
ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ವ್ಯಾಪಿಸಿ ಪೂರ್ವ ಏಷ್ಯಾದಲ್ಲಿ 11 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನಕ್ಕೆ ನೂಕಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆ ನೀಡಿದೆ.

