corona

ಕೆಲ ನಿರ್ಬಂಧಗಳೊಂದಿಗೆ ನಗರದಲ್ಲಿ ಬಸ್, ಮೆಟ್ರೋ ಸಂಚಾರ ಆರಂಭಕ್ಕೆ ಚಿಂತನೆ: ಬಿಬಿಎಂಪಿ
ಎರಡನೇ ಹಂತದ ಅನ್'ಲಾಕ್ ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಸಲುವಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಲು ಹಾಗೂ ಧಾರ್ಮಿಕ ಕ್ಷೇತ್ರಗಳ ತೆರೆಯಲು ಚಿಂತನೆಗಳು ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಏರಿಳಿತ: ದೇಶದಲ್ಲಿಂದು 67,208 ಹೊಸ ಕೇಸ್ ಪತ್ತೆ; 2,330 ಮಂದಿ ಸಾವು
ಭಾರತದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಗುರುವಾರ ಕೊಂಚ ಏರಿಕೆ ಕಂಡಿದೆ. ದೇಶದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 67,208 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 2,330 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರ ಹೆಚ್ಚಳಕ್ಕೆ ಇರಲಿಲ್ಲವೇ ಭಾರತೀಯ ವಿಜ್ಞಾನಿಗಳ ಬೆಂಬಲ?: ಸತ್ಯ ಬಹಿರಂಗ!
ಕೊರೋನಾ ಲಸಿಕೆ ಕೋವಿಶೀಲ್ಡ್ ನ 2 ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ವಿಜ್ಞಾನಿಗಳ ಬೆಂಬಲ ಇರಲಿಲ್ವಾ? ಹೀಗೊಂದು ಪ್ರಶ್ನೆ ಈಗ ರಾಯ್ಟರ್ಸ್ ವರದಿಯಿಂದ ಉದ್ಭವಿಸಿದೆ.

ಭಾರತದಲ್ಲಿ ಕೊರೋನಾ ಅಬ್ಬರ ಇಳಿಕೆ: ದೇಶದಲ್ಲಿಂದು 62,224 ಹೊಸ ಕೇಸ್ ಪತ್ತೆ, 2542 ಮಂದಿ ಸಾವು
ಭಾರತದಲ್ಲಿ ಕೊರೋನಾ ಅಬ್ಬರ ಇಳಿಕೆಯಾಗುತ್ತಿದ್ದು, ದೇಶದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 62,224 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 2542 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ: ದೇಶದಲ್ಲಿಂದು ಕೇವಲ 60,471 ಹೊಸ ಕೇಸ್ ಪತ್ತೆ; 2,726 ಮಂದಿ ಸಾವು
ಭಾರತದಲ್ಲಿ ಕೊರೋನಾ 2ನೇ ಅಲೆಯ ತೀವ್ರತೆ ಮತ್ತಷ್ಟು ಕಡಿಮೆಯಾಗಿದೆ. ಮಂಗಳವಾರ 60,471 ಜನರಲ್ಲಿ ಸೋಂಕು ಕಂಡು ಬಂದಿದ್ದು, ಇದು 75 ದಿನಗಳಲ್ಲೇ ಕನಿಷ್ಟವಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ 2,726 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್-19 ಎಫೆಕ್ಟ್: ಟೆಕ್ಕಿ, ವಿದ್ಯಾರ್ಥಿಗಳಿಗೆ ದೊಡ್ಡ ತಲೆ ನೋವಾಗಿರುವ ಇಂಟರ್ನೆಟ್ ಸಮಸ್ಯೆ!
ವರ್ಕ್ ಫ್ರಂ ಹೋಮ್ ಹಾಗೂ ಆನ್'ಲೈನ್ ತರಗತಿಗಳು ಉತ್ತಮ ಹೌದು. ಆದರೆ, ಪ್ರತಿಯೊಬ್ಬರಿಗೂ ಇದು ಉತ್ತಮವೆನಿಸುವುದಿಲ್ಲ. ಇದಕ್ಕೆ ಕಾರಣ ಇಂಟರ್ನೆಟ್ ಸಂಪರ್ಕ ಸೂಕ್ತ ರೀತಿಯಲ್ಲಿ ಸಿಗದಿರುವುದು.

1.30 ಲಕ್ಷ ರೂ. ಬಾಕಿ ಹಣ ಪಾವತಿಗೆ ಖಾಸಗಿ ಆಸ್ಪತ್ರೆ ಒತ್ತಾಯ; ಮೃತದೇಹ ಪಡೆಯಲು ಒದ್ದಾಡಿದ ಬಡ ಕುಟುಂಬ
ಕೋವಿಡ್ನಿಂದ ನಿಧನರಾಗಿದ್ದ ರೋಗಿಯ ಮೃತದೇಹ ಒತ್ತೆ ಇಟ್ಟುಕೊಂಡು ರೂ.1.30 ಲಕ್ಷ ಚಿಕಿತ್ಸಾ ಶುಲ್ಕ ಪಾವತಿಸುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ಪಟ್ಟು ಹಿಡಿದಿದ್ದು, ಹಣ ಪಾವತಿ ಮಾಡಲಾಗದ ಬಡ ಕುಟುಂಬವೊಂದು ಒದ್ದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಕೋವಿಡ್-19: ಭಾರತದಲ್ಲಿಂದು 80,834 ಹೊಸ ಕೇಸ್ ಪತ್ತೆ, 3,303 ಮಂದಿ ಸಾವು
ದೇಶದಾದ್ಯಂತ ಭಾನುವಾರ 80,834 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಸತತ 4ನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಜೊತೆಗೆ ಕಳೆದ 71 ದಿನಗಳ ಸೋಂಕಿತರ ಕನಿಷ್ಟ ಸಂಖ್ಯೆ ಇದಾಗಿದೆ.

ಸೋಂಕು, ಪಾಸಿಟಿವಿಟಿ ಪ್ರಮಾಣ ಏರಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜನರ ಮೇಲಿದೆ: ಬಿಬಿಎಂಪಿ
ಅನ್'ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದು, ನಗರದಲ್ಲಿ ಸೋಂಕು ಹಾಗೂ ಪಾಸಿಟಿವಿಟಿ ಪ್ರಮಾಣ ಏರಿಕೆಯಾಗದಂತೆ ಮಾಡುವ ಜವಾಬ್ದಾರಿ ಜನರ ಮೇಲೆಯೇ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಶನಿವಾರ ಹೇಳಿದ್ದಾರೆ.

