coronavirus

ಚಾಮರಾಜನಗರ: ಕೋವಿಡ್ ತುರ್ತುಸಂದರ್ಭದಲ್ಲಿ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದ 14 ಅಧಿಕಾರಿ, ನೌಕರರಿಗೆ ನೋಟಿಸ್ ಜಾರಿ
ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡದೇ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್ಪೋಸ್ಟ್ ಮೂಲಕ ಪ್ರತಿದಿನ ಮೈಸೂರಿಗೆ ಸಂಚರಿಸುತ್ತಿರುವ 14 ಅಧಿಕಾರಿ ನೌಕರರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಕೊರೋನಾ: ಕಂಗಾಲಾಗಿರುವ ಕಲಬುರಗಿ ವೈದ್ಯರ ನೆರವಿಗೆ ತೆರಳಲಿರುವ ಬೆಂಗಳೂರು ತಜ್ಞರು
ಕಲಬುರಗಿಯಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಲೇ ಇದ್ದು ಬುಧವಾರ ಒಂದೇ ದಿನ 8 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಂತೆ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ ಅರ್ಧಶತಕ ದಾಟಿದೆ. ಕೇವಲ ಸೋಂಕಿತ ಸಂಖ್ಯೆಯಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿಯೇ ಇದೆ. ಆದರೆ, ಗುಣಮುಖರಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯೇ ಇದೆ.

ಕೋವಿಡ್-19: ಮೇ 4ರಿಂದ ದೇಶದ ಬಹುತೇಕ ಜಿಲ್ಲೆಗಳಲ್ಲಿ ಲಾಕ್'ಡೌನ್ ಸಡಿಲ, ಶೀಘ್ರದಲ್ಲೇ ಹೊಸ ಮಾರ್ಗಸೂಚಿ- ಕೇಂದ್ರ ಗೃಹ ಸಚಿವಾಲಯ
2ನೇ ಹಂತದ ಲಾಕ್'ಡೌನ್ ಮೇ.3ರಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮೇ.4ರಿಂದ ಹೊಸ ಮಾರ್ಗಸೂಚಿಗಳು ಬಿಡುಗಡೆಯಾಗಲಿವೆ. ಅದರಲ್ಲಿ ಹಲವು ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಲಾಕ್'ಡೌನ್ ಸಡಿಲಗೊಳಿಸಲಾಗುತ್ತದೆ. ಈ ಕುರಿತು ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಕೋವಿಡ್-19: ಬೆಳಗಾವಿಯಲ್ಲಿ 14 ಸೋಂಕಿತರು ಸೇರಿ ರಾಜ್ಯದಲ್ಲಿ ಒಂದೇ ದಿನ 22 ಪ್ರಕರಣ; ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಗುರುವಾರ ಮತ್ತೆ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ವಾರಿಯರ್ಸ್ಗೆ ಸಲಾಂ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಕರ್ತವ್ಯಕ್ಕಾಗಿ, ವೈಯಕ್ತಿಕ ತ್ಯಾಗಗಳ ಜತೆಗೆ, ಜೀವದ ಹಂಗು ತೊರೆದು ಸೇವೆಗಾಗಿ ಅರ್ಪಿಸಿಕೊಂಡಿರುವ ಪೌರಕಾರ್ಮಿಕರು, ಪೊಲೀಸರು, ವೈದ್ಯರು, ದಾದಿಯರು, ಕಮಾಂಡೊ ಪಡೆ, ಅಗ್ನಿಶಾಮಕ ಮತ್ತು ಭದ್ರತಾ ಸಿಬ್ಬಂದಿ, ಅಡುಗೆಯವರು, ಚಾಲಕರು, ಆಶಾ ಕಾರ್ಯಕರ್ತೆಯರೆಲ್ಲರಿಗೂ ಸಲಾಂ ಹೇಳೋಣ...

ದೇಶದಲ್ಲಿ ಕೊರೋನಾ ಅಬ್ಬರ: 1,074 ಮಂದಿ ಸಾವು, ಸೋಂಕಿತರ ಸಂಖ್ಯೆ 33,000ಕ್ಕೆ ಏರಿಕೆ
ದೇಶದಲ್ಲಿ ಕೊರೋನಾ ಅಬ್ಬರ ಏರುತ್ತಲೇ ಇದ್ದು, ಇವರೆಗೂ ಮಹಾಮಾರಿ ವೈರಸ್ 1,074 ಮಂದಿಯನ್ನು ಬಲಿಪಡೆದುಕೊಂಡಿದೆ, ಅಲ್ಲದೆ, 33,000 ಸಾವಿರಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಗೆ 2.25 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 31.8 ಲಕ್ಷಕ್ಕೆ ಏರಿಕೆ
ವಿಶ್ವದೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ.

ಕಲಬುರಗಿಯಲ್ಲಿ ಮೇ 7ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ ಶರತ್ ಬಿ
ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೊನಾ ಅರ್ಧ ಶತಕ ಬಾರಿಸಿದ್ದು, ಜಿಲ್ಲೆಯಾದ್ಯಂತ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ.

ಸರ್ಕಾರಕ್ಕೂ ತಟ್ಟಿದ ಸೋಂಕು ಭೀತಿ: ಐವರು ಸಚಿವರು ಸಂಪುಟಕ್ಕೆ ಹಾಜರಾಗದಂತೆ ಸೂಚನೆ
ಕೊರೋನಾ ಸೋಂಕಿನ ಭೀತಿ ಇದೀಗ ರಾಜ್ಯ ಸರ್ಕಾರಕ್ಕೂ ತಟ್ಟಿದೆ. ಕೊರೋನಾ ಸೋಂಕಿತರು ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಐವರು ಸಚಿವರು ಇಂದಿನ ಸಂಪುಟ ಸಭೆಗೆ ಗೈರಾಗಲಿದ್ದಾರೆ.

