coronavirus

ದೇಶಾದ್ಯಂತ ನಿನ್ನೆ 16,002 ಕೊರೋನಾ ಪರೀಕ್ಷೆ, ಶೇಕಡ 0.2ರಷ್ಟು ಮಾತ್ರ ಪಾಸಿಟಿವ್ ಪ್ರಕರಣ
ಕೊರೊನಾ ವೈರಸ್ ಹಬ್ಬುವ ವಿಷಯದಲ್ಲಿ ಪ್ರಪಂಚದ ಉಳಿದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸೋಂಕು ಪ್ರಸರಣ ಪ್ರಮಾಣ ಅತ್ಯಂತ ಕಡಿಮೆಯಿದೆ. ಅಲ್ಲದೆ, ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯೂ ಆಶಾದಾಯಕವಾಗಿದೆ. ಈ ವೈರಸ್ಗೆ ಸೂಕ್ತ ಲಸಿಕೆ ಇಲ್ಲದಿದ್ದರೂ, ನಮ್ಮ ವೈದ್ಯರು ಲಭ್ಯವಿರುವ ಔಷಧಿಗಳನ್ನು ಬಳಸಿ ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.

ಬೇಡಿಕೆ ಕುಸಿದರೂ ಇಳಿಯದ ಪೆಟ್ರೋಲ್, ಡೀಸೆಲ್ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ?
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಪರಿಣಾಮ ತೈಲ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದರೂ ಸತತ 25ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿದಿಲ್ಲ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿವೆ 6000 ಬೆಡ್, 600 ವೆಂಟಿಲೇಟರ್: ಕೊವೀಡ್-19 ಸಮಿತಿ
ಕೊರೋನಾ ಮಹಾಮಾರಿ ಮತ್ತಷ್ಟು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೋವಿಡ್ -19 ಸಮಿತಿ ಸರ್ವೇ ಮಾಡಿದ್ದು ಈ ಪ್ರಕಾರ ಬೆಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗಳ ಪೈಕಿ 6000 ಬೆಡ್ ಮತ್ತು 600 ವೆಂಟಿಲೇಟರ್ ಗಳಿವೆ ಎಂದು ವರದಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವರೊಂದಿಗೆ ರಾಮುಲು ವಿಡಿಯೋ ಸಂವಾದ: ರಾಜ್ಯದಲ್ಲಿ 10 ಹಾಟ್ ಸ್ಪಾಟ್ ಜಿಲ್ಲೆ ಗುರುತು
ರಾಜ್ಯದಲ್ಲಿ ಕೊರೋನಾ ಸೋಂಕಿನ ಹತ್ತು ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದ್ದು, ಇವುಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ.

ಬೆಂಗಳೂರು: ಕ್ವಾರಂಟೈನ್ನಲ್ಲಿದ್ದ 300 ಮಂದಿ ತಬ್ಲೀಘಿಗಳ ಪೈಕಿ ಮೂವರಲ್ಲಿ ಸೋಂಕು, ಆತಂಕ ಸೃಷ್ಠಿ!
ದೆಹಲಿಯ ನಿಜಾಮುದ್ದೀನ್ನಿಂದ ನಗರಕ್ಕೆ ವಾಪಾಸ್ಸಾಗಿ ಹಜ್ ಭವನದ ಕ್ವಾರೆಂಟೈನ್ನಲ್ಲಿಡಲಾಗಿದ್ದ 300 ಮಂದಿ ತಬ್ಲೀಘಿಗಳ ಪೈಕಿ ಮೂವರಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿದೆ.

ಅಮೆರಿಕಾದದಲ್ಲಿ ಲಾಕ್ ಡೌನ್ ಆದ ಹಾಕಿ ಚಾಂಪಿಯನ್: ತಕ್ಷಣದ ವೈದ್ಯಕೀಯ ನೆರವಿಗಾಗಿ ಅಶೋಕ್ ದಿವಾನ್ ಗೆ ಕೇಂದ್ರದ ಸಹಾಯ
ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಸಿಲುಕಿರುವ ಭಾರತದ ಮಾಜಿ ಹಾಕಿ ಆಟಗಾರ ಅಶೋಕ್ ದಿವಾನ್ ಅವರಿಗೆ "ತಕ್ಷಣದ ವೈದ್ಯಕೀಯ ಚಿಕಿತ್ಸೆ" ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್'ಗೆ ಹೆಚ್ಚಿದ ಬೇಡಿಕೆ: ಮಿತ್ರ ರಾಷ್ಟ್ರಗಳಿಗೆ ಸಹಾಯ ಮಾಡಲು ಭಾರತ ಸಿದ್ಧ ಎಂದ ಪ್ರಧಾನಿ ಮೋದಿ
ಮಹಾಮಾರಿ ಕೊರೋನಾ ವೈರಸ್ ಹತ್ತಿಕ್ಕಲು ಇಡೀ ವಿಶ್ವವೇ ಒಗ್ಗಟ್ಟಾಗಿ ನಿಂತಿದ್ದು, ಈ ನಡುವಲ್ಲೇ ವೈರಸ್ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಈ ಮದ್ದಿಗೆ ಎಲ್ಲೆಡೆ ಬೇಡಿಕೆಗಳು ಹೆಚ್ಚಾಗಿದ್ದು, ಸ್ನೇಹ ರಾಷ್ಟ್ರಗಳಿಗೆ ಸಹಾಯ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಬಡವರ ಹಸಿವು ಇಂಗಿಸಲು ಬಂದಿದೆ ದಾಸೋಹ-2020 ಆ್ಯಪ್!
ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್ ಬಡವರ ಮೇವೆ ಗಂಭೀರ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಬಡವರ ಹಸಿವು ಇಂಗಿಸುವ ಸಲುವಾಗಿ ಸರ್ಕಾರ ದಾಸೋಹ-2020 ಎಂಬ ಹೊಸ ಆ್ಯಪ್ ವೊಂದನ್ನು ಹೊರತಂದಿದೆ.

ಏ.14ರಿಂದ ಜನರ ಮನೆ ಬಾಗಿಲಿಗೇ ಬರಲಿದೆ ಅಗತ್ಯ ವಸ್ತುಗಳು!
ಕತ್ರಗುಪ್ಪೆ ಸಂಪೂರ್ಣವಾಗಿ ಸೀಲ್ ಆದ ಬಳಿಕ ಅಲ್ಲಿನ 1,200 ನಿವಾಸಿಗಳ ಮನೆಗಳ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದ ಬಿಬಿಎಂಪಿಗೆ ಇದೀಗ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇದರಂತೆ ಏಪ್ರಿಲ್ 14ರಿಂದ ಬೆಂಗಳೂರಿನ ಎಲ್ಲಾ ಭಾಗದ ನಿವಾಸಿಗಳ ಮನೆಬಾಗಿಲಿಗೂ ಅಗತ್ಯ ವಸ್ತುಗಳನ್ನು ತಲುಪಿಸಲು ನಿರ್ಧರಿಸಿದೆ.

