coronavirus

ಕೊರೋನಾ ವೈರಸ್: ವಿಶ್ವದೆಲ್ಲೆಡೆ ಮಹಾಮಾರಿಗೆ 30249 ಮಂದಿ ಬಲಿ, ಸೋಂಕಿತರ ಸಂಖ್ಯೆ 6,49,904ಕ್ಕೆ ಏರಿಕೆ
ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿಶ್ವದೆಲ್ಲೆಡೆ 30249 ಮಂದಿಯನ್ನು ಬಲಿ ಪಡೆದುಕೊಂಡಿದ್ದು, 6,49,904 ಮಂದಿ ಸೋಂಕಿಗೊಳಗಾಗಿದ್ದಾರೆಂದು ವರದಿಗಳಿಂತ ತಿಳಿದುಬಂದಿದೆ.

ಚೀನಾದಲ್ಲಿ ಕೊರೋನಾ ವೈರಸ್ ಮೊಟ್ಟ ಮೊದಲು ಹರಡಿದ ವ್ಯಕ್ತಿ ಪೇಷೆಂಟ್ ಝೀರೋ ಇವರೇ....
ಕೊರೋನಾ ವೈರಸ್ ಗೆ ನಿರ್ದಿಷ್ಟ ಚಿಕಿತ್ಸೆಯ ಬಗ್ಗೆ ಜಗತ್ತೇ ತಲೆಕೆಡಿಸಿಕೊಂಡು ಕೂತಿರುವುದು ಒಂದೆಡೆಯಾದರೆ, ಈ ರೋಗ ಚೀನಾದಲ್ಲಿ ಮೊದಲು ಹರಡಿದ್ದು ಯಾರಿಗೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಉ.ಪ್ರದೇಶ, ಪ.ಬಂಗಾಳ, ತಮಿಳುನಾಡಲ್ಲಿ ಹೊಸ ಪ್ರಕರಣಗಳ ಪತ್ತೆ: ದೇಶದಲ್ಲಿ ಸೋಂಕಿತರ ಸಂಖ್ಯೆ 980ಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ವೈರಸ್ ರುದ್ರತಾಂಡವ ಮುಂದುವರೆದಿದ್ದು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರಂತೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 980ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ
ಕೊರೋನಾ ವೈರಸ್ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

ಕೊರೋನಾ: ಹೊಸ ಹಾಡು ರಚಿಸಿದ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ!
ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟೈಲಿಸ್ಟ್ ಆಲ್‌ರೌಂಡರ್ ಡ್ವೆನ್ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್ ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಕೊರೋನಾ ಭೀತಿ: 8 ಲಕ್ಷ ಲೀ.ಹಾಲು ಮಾರಾಟವಾಗುತ್ತಿಲ್ಲ-ಬಾಲಚಂದ್ರ ಜಾರಕಿಹೊಳಿ
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ನಂದಿನಿ ಹಾಲು ಹಾಗೂ ಮೊಸರಿಗೆ ಬೇಡಿಕೆ ಕುಸಿದಿದ್ದು, ಪ್ರತಿನಿತ್ಯ 8 ಲಕ್ಷ ಲೀಟರ್ ಹಾಲು ಮಾರಾಟವಾಗದೇ ಉಳಿಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ

ಕೊರೋನಾ ವೈರಸ್ ಮೂಲಕ ಸಮುದಾಯದ ಹೀಯಾಳಿಕೆ: ಪತ್ರಿಕೆ ವಿರುದ್ಧ ಹೋರಾಟಕ್ಕೆ ಮುಸ್ಲಿಂ ಜಮಾಅತ್ ನಿರ್ಧಾರ
ಕೊರೋನಾವೈರಸ್ ಆತಂಕದ ನಡುವೆ ಒಂದು ಸಮುದಾಯವನ್ನು ಹೀಯಾಳಿಸಿ, ಕೊರೋನಾವನ್ನು ಕೋಮುವಾದೀಕರಣ ಮಾಡಲು ಹೊರಟಿರುವ ದಿನಪತ್ರಿಕೆಯೊಂದರ ವಿರುದ್ಧ ಮುಖ್ಯಮಂತ್ರಿ, ಪತ್ರಿಕಾ ಸಂಪಾದಕರು ಮತ್ತು ಪ್ರೆಸ್ ಕೌನ್ಸಿಲ್ ಗೆ ದೂರು ನೀಡಲಾಗುವುದು ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ತಿಳಿಸಿದೆ.

ಭಟ್ಕಳದ ಒಂದೇ ಕುಟುಂಬದ ಮೂವರಲ್ಲಿ ಕೋವಿಡ್-19 ಸೋಂಕು ದೃಢ
ದುಬೈಯಿಂದ ಆಗಮಿಸಿದ್ದ 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಕುಟುಂಬದ ಮೂವರು ಸದಸ್ಯರಿಗೆ ಕೋವಿಡ್ 19 ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಕೊವಿಡ್-19: ರಾಜ್ಯದಲ್ಲಿ ಮತ್ತೆ 10 ಹೊಸ ಪ್ರಕರಣ; ಕೇರಳದಲ್ಲಿ ಮೊದಲ ಸಾವು; ದೇಶಾದ್ಯಂತ 885ಕ್ಕೂ ಹೆಚ್ಚು ಸೋಂಕಿತರು
ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಷ್ಟು ದಿನ ಸೋಂಕಿತರ ಜನರಷ್ಟೇ ಕಂಡುಬರುತ್ತಿದ್ದ ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

