coronavirus

ಆ್ಯಂಬುಲೆನ್ಸ್'ಗೆ ಕಾದು ರಸ್ತೆಯಲ್ಲೇ ಪ್ರಾಣಬಿಟ್ಟ ವ್ಯಕ್ತಿ: 3 ಗಂಟೆಗಳ ಕಾಲ ಮಳೆಯಲ್ಲೇ ನೆನೆದ ಸೋಂಕಿತನ ಮೃತದೇಹ!
ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ಸೇರಲು ಬೆಳಿಗ್ಗೆಯೇ ಕರೆ ಮಾಡಿದರೂ ಸಂಜೆ ನಾಲ್ಕು ಗಂಟೆಯಾದರೂ ಬಾರದ ಆ್ಯಂಬುಲೆನ್ಸ್, ಸೋಂಕಿತ ಉಸಿರಾಡಲು ಆಗದೇ ಮೃತಪಟ್ಟ ನಾಲ್ಕು ತಾಸಿನ ಬಳಿಕ ಶವ ತೆಗೆದುಕೊಂಡು ಹೋಗಲು ಬಂದ ಮನಕಲುಕುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ಕೊರೋನಾ ಸೋಂಕಿತರಿಗೆ ಆಯುರ್ವೇದ ಔಷಧ?: ಕ್ಲಿನಿಕಲ್ ಪ್ರಯೋಗ ಬಹುತೇಕ ಯಶಸ್ವಿ
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಆತಂಕದ ನಡುವಲ್ಲೇ ಆಯುರ್ವೇದ ಔಷಧಿಯೊಂದು ಜನರಲ್ಲಿ ಆಶಾಭಾವನೆಯನ್ನು ಮೂಡಿಸಲು ಆರಂಭಿಸಿದೆ.

ಬಿಡದಿಯ ಬಾಷ್ ಕಂಪನಿಗೂ ಕೊರೋನಾ ಕಂಟಕ: 62 ಮಂದಿಯಲ್ಲಿ ವೈರಸ್ ದೃಢ
ಮಹಾಮಾರಿ ಕೊರೋನಾ ವೈರಸ್'ಗೆ ಇಡೀ ವಿಶ್ವವೇ ಬಿಚ್ಚಿಬಿದ್ದಿದ್ದು, ಪ್ರತೀಯೊಬ್ಬರನ್ನೂ ಕಾಡಲು ಆರಂಭಿಸಿದೆ. ದಿನದಿನಕ್ಕೆ ಮಹಾಮಾರಿಯ ಕರಾಳತೆ ಮಿತಿ ಮೀರುತ್ತಿದ್ದು, ಇದೀಗ ಬಿಡದಿ ಬಳಿಯಿರುವ ಬಾಷ್ ಕಂಪನಿಗೂ ಕೊರೋನಾ ಕಂಟಕ ಶುರುವಾಗಿದೆ.

ಕರ್ನಾಟಕದಲ್ಲಿ ಶೇ.70ರಷ್ಟು ಕೊರೋನಾ ಪ್ರಕರಣಕ್ಕೆ ಟ್ರಾವೆಲ್ ಹಿಸ್ಚರಿಯೇ ಇಲ್ಲ!
ಕರ್ನಾಟಕದಲ್ಲಿ ಕೊರೋನಾ ಸೋಂಕು ಸಮುದಾಯದ ಹಂತಕ್ಕೆ ತಲುಪಿದೆಯೇ.. ಇಂತಹುದೊಂದು ಅನುಮಾನಕ್ಕೆ ಆರೋಗ್ಯ ಇಲಾಖೆ ಅಂಕಿಅಂಶಗಳು ಕಾರಣವಾಗಿದೆ...

50 ವರ್ಷದೊಳಗಿನ, ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ
ಲಕ್ಷಣ ರಹಿತ ಹಾಗೂ ಅತೀ ಕಡಿಮೆ ಲಕ್ಷಣ ಇರುವ ಕೊರೋನಾ ಸೋಂಕಿತರಿಗೆ ಮನೆಯಲ್ಲಿಯೇ ಆರೈಕೆ (ಹೋಮ್ ಐಸೋಲೇಷನ್)ಗೆ ಒಳಪಡಿಸುವುದಾಗಿ ಸರ್ಕಾರ ತಿಳಿಸಿದೆ.

ದೇಶಾದ್ಯಂತ 24 ಗಂಟೆಗಳಲ್ಲಿ 20,903 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 6.25 ಲಕ್ಷಕ್ಕೆ ಏರಿಕೆ
ಭಾರತದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 20,903 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,25,544ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ದೆಹಲಿಗೆ ಕೊರೋನಾಘಾತ: ಒಂದೇ ದಿನ 2,373 ಮಂದಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 92 ಸಾವಿರಕ್ಕೆ ಏರಿಕೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ದಿನ 2,373 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 92,000ಕ್ಕೆ ಏರಿಕೆಯಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಮೆರಿಕಾ: ಒಂದೇ ದಿನ 53 ಸಾವಿರ ಮಂದಿಯಲ್ಲಿ ಕೊರೋನಾ ಪತ್ತೆ, ಸೋಂಕಿತರ ಸಂಖ್ಯೆ 28 ಲಕ್ಷಕ್ಕೆ ಏರಿಕೆ
ಮಹಾಮಾರಿ ಕೊರೋನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕಂಗಾಲಾಗಿದ್ದು, ಒಂದೇ ದಿನ ರಾಷ್ಟ್ರದಲ್ಲಿ ಬರೋಬ್ಬರಿ 53,000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ವಂದೇ ಭಾರತ್ ಮೂಲಕ 4.75 ಲಕ್ಷ ಮಂದಿ ಸ್ವದೇಶಕ್ಕೆ ಆಗಮನ: ವಿದೇಶಾಂಗ ವ್ಯವಹಾರ ಸಚಿವಾಲಯ
ಕೊರೋನಾವೈರಸ್ ಸಾಂಕ್ರಾಮಿಕದ ಹಾವಳಿಯ ಕಾಲಘಟ್ಟದಲ್ಲಿ ಭಾರತ ಸರ್ಕಾರ ಮೇ 7 ರಂದು ವಂದೇ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದ ನಂತರ 4.75 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

