fire

ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ, ಎಲ್ಲಾ ಸಿಬ್ಬಂದಿ ಸುರಕ್ಷಿತ: ನೌಕಾಪಡೆ
ದೇಶ

ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ, ಎಲ್ಲಾ ಸಿಬ್ಬಂದಿ ಸುರಕ್ಷಿತ: ನೌಕಾಪಡೆ

ದೇಶದ ಐಎನ್ ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಶನಿವಾರ ಬೆಳಗ್ಗೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿರುವುದಾಗಿ ನೌಕಪಡೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ನಗರದಲ್ಲಿ ಹೆಚ್ಚಿದ ಕೋವಿಡ್ ಸಾವು: ಶವಾಗಾರಗಳಲ್ಲಿ ಆರಂಭವಾದ ಉರುವಲು ಸಮಸ್ಯೆ, ಬಿಬಿಎಂಪಿಗೆ ಶುರುವಾಯ್ತು ಮತ್ತೊಂದು ತಲೆನೋವು!
ರಾಜ್ಯ

ನಗರದಲ್ಲಿ ಹೆಚ್ಚಿದ ಕೋವಿಡ್ ಸಾವು: ಶವಾಗಾರಗಳಲ್ಲಿ ಆರಂಭವಾದ ಉರುವಲು ಸಮಸ್ಯೆ, ಬಿಬಿಎಂಪಿಗೆ ಶುರುವಾಯ್ತು ಮತ್ತೊಂದು ತಲೆನೋವು!

ಕೊರೋನಾ 2ನೇ ಆರಂಭವಾದಾಗಿನಿಂದಲೂ ಬಿಬಿಎಂಪಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ನಗರದಲ್ಲಿ ಕೊರೋನಾ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮೊದಲು ಸ್ಥಳದ ಅಭಾವ. ನಂತರ ಮೃತದೇಹ ಶವಸಂಸ್ಕಾರದ ವಿಳಂಬ ಸಮಸ್ಯೆಯಾಗಿ ಬಿಬಿಎಂಪಿಯನ್ನು ಕಾಡಿತ್ತು. ಇದೀಗ ಉರುವಲು ಕೊರತೆ ಸಮಸ್ಯೆ ಶುರುವಾಗತೊಡಗಿದೆ. 

ಮಹಾರಾಷ್ಟ್ರ: ಅನಿಲ ಸೋರಿಕೆಯಿಂದ ಅಗ್ನಿ ಅವಘಡ- 5 ಮಂದಿ ಗಾಯ
ದೇಶ

ಮಹಾರಾಷ್ಟ್ರ: ಅನಿಲ ಸೋರಿಕೆಯಿಂದ ಅಗ್ನಿ ಅವಘಡ- 5 ಮಂದಿ ಗಾಯ

ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿರುವ ಮನೆಯೊಂದರಲ್ಲಿ ಎಲ್'ಪಿಜಿ ಅನಿಲ ಸೋರಿಕೆಯಾದ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. 

ಗುಜರಾತ್ ಆಸ್ಪತ್ರೆ ಬೆಂಕಿ ದುರಂತ: ಸಿಎಂ ವಿಜಯ್ ರೂಪಾನಿ ಸಂತಾಪ, ಮೃತರ ಕುಟುಂಬಕ್ಕೆ ರೂ. 4 ಲಕ್ಷ ಪರಿಹಾರ ಘೋಷಣೆ
ದೇಶ

ಗುಜರಾತ್ ಆಸ್ಪತ್ರೆ ಬೆಂಕಿ ದುರಂತ: ಸಿಎಂ ವಿಜಯ್ ರೂಪಾನಿ ಸಂತಾಪ, ಮೃತರ ಕುಟುಂಬಕ್ಕೆ ರೂ. 4 ಲಕ್ಷ ಪರಿಹಾರ ಘೋಷಣೆ

ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು, ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ಗುಜರಾತ್: ಬರೂಚ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ದುರಂತ; 18 ರೋಗಿಗಳು ಸಜೀವ ದಹನ 
ದೇಶ

ಗುಜರಾತ್: ಬರೂಚ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ದುರಂತ; 18 ರೋಗಿಗಳು ಸಜೀವ ದಹನ 

ದೇಶದ ಅಲ್ಲಲ್ಲಿ ಆಸ್ಪತ್ರೆಗಳಲ್ಲಿ ಬೆಂಕಿ ಅವಘಡ ದುರಂತಗಳು ಸಂಭವಿಸುವುದು ನಿಲ್ಲುತ್ತಲೇ ಇಲ್ಲ. ಮಧ್ಯರಾತ್ರಿ ವೇಳೆ ಗುಜರಾತ್ ನ ಬರೂಚ್ ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕನಿಷ್ಠ 18 ಮಂದಿ ಕೋವಿಡ್ ರೋಗಿಗಳು ಸಜೀವ ದಹನವಾಗಿದ್ದಾರೆ ಎಂಬ ಮಾಹಿತಿ ಬಂದಿದೆ. 

ಭರೂಚ್ ಆಸ್ಪತ್ರೆ ಅಗ್ನಿ ದುರಂತ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ
ದೇಶ

ಭರೂಚ್ ಆಸ್ಪತ್ರೆ ಅಗ್ನಿ ದುರಂತ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ

ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. 

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ನಾಲ್ವರು ರೋಗಿಗಳ ಸಾವು 
ದೇಶ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ನಾಲ್ವರು ರೋಗಿಗಳ ಸಾವು 

ಆಸ್ಪತ್ರೆಗಳಲ್ಲಿ ಬೆಂಕಿ ದುರಂತ ಪ್ರಕರಣ ಮುಂದುವರಿಯುತ್ತಲೇ ಇದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾದಲ್ಲಿರುವ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬುಧವಾರ ನಸುಕಿನ ಜಾವ ಬೆಂಕಿ ಅವಘಡ ಉಂಟಾಗಿದೆ. 

ಕರಿಕಲ್‌ಬೆಟ್ಟ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ್ದ ಮೂವರು ಆರೋಪಿಗಳ ಬಂಧನ
ರಾಜ್ಯ

ಕರಿಕಲ್‌ಬೆಟ್ಟ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ್ದ ಮೂವರು ಆರೋಪಿಗಳ ಬಂಧನ

ಬಂಡೀಪುರ ಹುಲಿ ಯೋಜನೆಯ ಮದ್ದೂರು ವ್ಯಾಪ್ತಿಯಲ್ಲಿ ಬರುವ ಕರಿಕಲ್‌ಬೆಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ೫ ರಿಂದ ೮ ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 13 ರೋಗಿಗಳು ಸಜೀವ ದಹನ 
ದೇಶ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 13 ರೋಗಿಗಳು ಸಜೀವ ದಹನ 

ಮೊನ್ನೆಯಷ್ಟೇ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಾಗಿ 22 ಮಂದಿ ರೋಗಿಗಳು ಮೃತಪಟ್ಟಿದ್ದರು. ಕಳೆದ ವರ್ಷ ಕೊರೋನಾ ಸೋಂಕು ಬಂದ ಮೇಲೆ ದೇಶದ ಅಲ್ಲಲ್ಲಿ ಆಸ್ಪತ್ರೆಗಳಲ್ಲಿ ಹಲವು ದುರಂತ ಸಂಭವಿಸಿದೆ.