ಕರಿಕಲ್ಬೆಟ್ಟ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ್ದ ಮೂವರು ಆರೋಪಿಗಳ ಬಂಧನ

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಮದ್ದೂರು ವ್ಯಾಪ್ತಿಯಲ್ಲಿ ಬರುವ ಕರಿಕಲ್ಬೆಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ೫ ರಿಂದ 8 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಲಕ್ಕೀಪುರ ಕಾಲೋನಿಯ ಚೆಲುವ(48) ಹಾಗೂ ಮಣಿ ಮತ್ತು ಕೇರಳದ ಗಣೇಶ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಉಳಿದವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಗಂಧದ ಮರದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಚೆಲುವ ನ್ಯಾಯಾಲಯ ವಿಚಾರಣೆಗೆ ಹೋಗಿ ಬರುತ್ತಿದ್ದ, ಈ ಹಳೆ ವೈಷಮ್ಯದಿಂದ ಅರಣ್ಯ ಇಲಾಖೆ ವಿರುದ್ಧ ಕುಪಿತನಾದ ಇವನು ಇನ್ನುಳಿದವರ ಜೊತೆಗೂಡಿ ಮಾರ್ಚ್ 31 ರಂದು ಕರಿಕಲ್ಬೆಟ್ಟ ಅರಣ್ಯ ಪ್ರದೇಶದ ಮೂರು ಕಡೆ ಬೆಂಕಿ ಹಾಕಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಮದ್ದೂರು ವಲಯದ ವಲಯಾರಣ್ಯಾಧಿಕಾರಿ ಬಿ.ಸುಧಾಕರ್, ಉಪ ವಲಯ ಅರಣ್ಯಾಧಿಕಾರಿಗಳಾದ ಎಲ್.ನಾಗರಾಜು, ಸ್ವಾಮಿ, ರಾಮಲಿಂಗಪ್ಪ, ಅರಣ್ಯ ರಕ್ಷಕರಾದ ನವೀನ್, ದೇವಪ್ಪ, ವೀಕ್ಷಕರಾದ ರಾಜಪ್ಪ, ನಾಗೇಶ, ಪ್ರದೀಪ, ಸಿದ್ದಲಿಂಗ, ಚಿಕ್ಕಸ್ವಾಮಿ, ಕೃಷ್ಣಸ್ವಾಮಿ, ವಾಹನ ಚಾಲಕರಾದ ಜೀವನ್ ಮತ್ತು ಪ್ರಶಾಂತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


