ವಾಣಿಜ್ಯಕೊರೋನಾ ಸಮಸ್ಯೆ ಮುಗಿದ ಮೇಲೆ ಭಾರತ ಐಟಿ ವಲಯ ಹಿಂದಿಗಿಂತ ಬಲಿಷ್ಠವಾಗಲಿದೆ: ಕ್ರಿಸ್ ಗೋಪಾಲಕೃಷ್ಣನ್
ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಇಡೀ ವಿಶ್ವವೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ, ಆಕ್ಸಿಲರ್ ವೆಂಚುರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಈ ಎಲ್ಲಾ ಸಮಸ್ಯೆಗಳು ಮುಗಿದ ಮೇಲೆ ಭಾರತದ ಐಟಿ ವಲಯ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.