Mysuru,

ಮುಡಾ ಪ್ರಕರಣ: ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ- ಸಿಎಂ ಸಿದ್ದರಾಮಯ್ಯ
ಮೈಸೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನನ್ನ ವಿರುದ್ಧ ಇ.ಡಿ ಗೂ ದೂರು ನೀಡಲಾಗಿದೆ. ಈ ರೀತಿ ದೂರು ಯಾರು ಬೇಕಾದರೂ ನೀಡಬಹುದು. ಆದರೆ ಕಾನೂನು ಏನು ಹೇಳುತ್ತದೆ ಹಾಗೆ ನಡೆದುಕೊಳ್ಳಬೇಕಾಗುತ್ತದೆ. ನನ್ನ ವಿಚಾರದಲ್ಲೂ ಕಾನೂನು ರೀತಿ ಕ್ರಮ ಆಗುತ್ತದೆ

ಕರ್ನಾಟಕದಲ್ಲಿ ಮತ್ತೊಂದು Rave Party; KRS ನಿರ್ಬಂಧಿತ ಪ್ರದೇಶದಲ್ಲಿ ಪಾರ್ಟಿಯಲ್ಲಿ ತೊಡಗಿದ್ದ 50 ಮಂದಿ ಬಂಧನ
ಕೆಆರ್‌ಎಸ್‌ನ ಹಿನ್ನೀರಿನ ಬಳಿ ಅನಧಿಕೃತವಾಗಿ ರೇವ್ ಪಾರ್ಟಿ ಆಯೋಜಿಸಿದ್ದ ಘಟನೆ ಮೈಸೂರನ್ನು ಬೆಚ್ಚಿಬೀಳಿಸಿದ್ದು, ಮಾಹಿತಿ ತಿಳಿದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೈಸೂರು ದಸರಾ 2024: ಅ.3-11ರವರೆಗೂ ಅರಮನೆಯಲ್ಲಿ ಖಾಸಗಿ ದರ್ಬಾರ್, ಅ.12ಕ್ಕೆ ಜಂಬೂ ಸವಾರಿ
ಅಕ್ಟೋಬರ್ 3ರಂದು ಚಾಮುಂಡಿಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45ರ ನಡುವೆ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ದಸರಾ ಉದ್ಘಾಟಿಸಲಿದ್ದು, ಅಕ್ಟೋಬರ್ 3 ರಿಂದ 11ರವರೆಗೂ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಅಕ್ಟೋಬರ್ 12ರ ಶನಿವಾರ ಜಂಬೂ ಸವಾರಿ ನಡೆಯಲಿದೆ.

ಮೈಸೂರು ದಸರಾ ಉತ್ಸವಕ್ಕೆ ಜಿಲ್ಲಾಡಳಿತ ಸರ್ವ ಸಿದ್ಧತೆ, ಅ.3 ರಂದು ಸಾಹಿತಿ ಹಂ.ಪ. ನಾಗರಾಜಯ್ಯ ಚಾಲನೆ- ಸಿಎಂ ಸಿದ್ದರಾಮಯ್ಯ
ಅಕ್ಟೋಬರ್, 3 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಈ ಬಾರಿ ಹಂ.ಪ. ನಾಗರಾಜಯ್ಯ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ

ಸಿಡಿಮದ್ದು ತಾಲೀಮು: ಭಾರೀ ಶಬ್ದಕ್ಕೆ ಬೆದರಿದ ದಸರಾ ಆನೆಗಳು, ಚದುರಿ ಓಡಿದ ಕುದುರೆಗಳು..!
ಪ್ರಾಣಿಗಳನ್ನ ಒಗ್ಗಿಸಲು ಮೊದಲ ಹಂತದ ತಾಲೀಮು ಗುರುವಾರ ನಡೆಯಿತು. ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.

ಯುವ ದಸರಾ 2024: ಮೈಸೂರಿನಲ್ಲಿ ಹರಿಯಲಿದೆ ಸಂಗೀತ ಸುಧೆ; ಇಳಯರಾಜ-ರೆಹಮಾನ್ ಪ್ರಮುಖ ಆಕರ್ಷಣೆ
ಯುವ ದಸರಾ ಸಮಿತಿಯಿಂದ ಅ.6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.6ರಂದು ಅಶ್ವಿನಿ ಪುನೀತ್ ರಾಜ್‌ಕುಮರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮೈಸೂರು: ದಸರಾ ಆನೆಗಳ ಮುಂದೆ ಸೆಲ್ಫೀ, ರೀಲ್ಸ್'ಗೆ ನಿಷೇಧ..!
ಕೆಲವರು ಅನೆಯ ದಂತ ಹಿಡಿದು, ಮತ್ತೆ ಕೆಲವರು ಸೊಂಡಿಲು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಯದುವೀರ್ ನೇತೃತ್ವದ ಸಭೆ ಯಶಸ್ವಿ: ಮೈಸೂರು ಅರಮನೆ ಮುಂಭಾಗ ಪಾರಿವಾಳಗಳಿಗೆ ಕಾಳು ಹಾಕುವ ಪದ್ಧತಿಗೆ ಬ್ರೇಕ್..!
ಪಾರಿವಾಳಗಳಿಗೆ ಆಹಾರ ಹಾಕುವ ಪದ್ದತಿ ರದ್ದತಿ ಮತ್ತು ಕಾಳು ಹಾಕುವುದರಿಂದ ಉದ್ಭವಿಸುವ ಸಮಸ್ಯೆಗಳ ವಿಚಾರವಾಗಿ ಇಂದು (ಸೆ.22) ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಬಳಿ ನಾಗರೀಕರ ಜಾಗೃತ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯರು, ಪರಿಸರವಾದಿಗಳು, ಸಾಮಾಜಿಕ ತಜ್ಞರು ಸೇರಿ ಹಲವರು ಭಾಗಿಯಾಗಿದ್ದರು.


