Newdelhi

ಪನಾಮಾ ಪೇಪರ್ಸ್ ಲೀಕ್ ಪ್ರಕರಣ: ಇಡಿಯಿಂದ ಸತತ ಐದು ಗಂಟೆಗಳ ಕಾಲ ಐಶ್ವರ್ಯಾ ರೈ ವಿಚಾರಣೆ
ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸತತ ಐದು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದರು. ಸೋಮವಾರ ಸಂಜೆ ಅವರು ಇಡಿ ಕಚೇರಿಯಿಂದ ನಿರ್ಗಮಿಸಿದರು.

2021-22ರಲ್ಲಿ ನೈಸರ್ಗಿಕ ವಿಪತ್ತಿನಲ್ಲಿ ಸುಮಾರು 2,000 ಜನರ ಸಾವು: ಕೇಂದ್ರ ಸರ್ಕಾರ
2021-22ರಲ್ಲಿ ಸಂಭವಿಸಿದ ಚಂಡಮಾರುತ, ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 2,000 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಮಲ್ಯ, ನೀರವ್ ಮೋದಿಯಂತಹ ಸುಸ್ತಿದಾರರ ಆಸ್ತಿ ಮಾರಾಟದಿಂದ 13,100 ಕೋಟಿ ರೂ. ವಸೂಲಿ: ನಿರ್ಮಲಾ ಸೀತಾರಾಮನ್
ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತಹ ಸಾಲ ಮರುಪಾವತಿಸದೆ ತಲೆ ಮರೆಸಿಕೊಂಡಿರುವ ಉದ್ಯಮಿಗಳ ಆಸ್ತಿ ಮಾರಾಟದಿಂದ ರೂ. 13,109.17 ಕೋಟಿಯನ್ನು ಬ್ಯಾಂಕ್ ಗಳು ವಶಪಡಿಸಿಕೊಂಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದರು.

ರೈಲ್ವೆಯಲ್ಲಿನ ಯುವ ಅಧಿಕಾರಿಗಳು ಹೊಸ ಚಿಂತನೆಗಳೊಂದಿಗೆ ಬನ್ನಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕಿವಿಮಾತು
ರೈಲ್ವೆ ಮಂಡಳಿಯಲ್ಲಿ ಮುಖ್ಯಸ್ಥ ಅಥವಾ ಸದಸ್ಯರಂತಹ ದೊಡ್ಡ ಸ್ಥಾನ ತಲುಪುವ ಹೊತ್ತಿಗೆ ರೈಲ್ವೆಯಲ್ಲಿ ಹೇಗೆ ನೋಡಲು ಬಯಸುತ್ತೀರಿ ಎಂದು ಸಚಿವ ಅಶ್ವಿನಿ ವೈಷ್ಣವ್ ಯುವ ಅಧಿಕಾರಿಗಳನ್ನು ಕೇಳಿದರು.

ಮುಂದಿನ ವರ್ಷದ ಮೇ ತಿಂಗಳವರೆಗೂ ಉಚಿತ ಪಡಿತರ ವಿತರಣೆ ವಿಸ್ತರಿಸಲು ದೆಹಲಿ ಸಂಪುಟ ತೀರ್ಮಾನ
ಮುಂದಿನ ವರ್ಷದ ಮೇ. 31ರವರೆಗೂ ನಗರದಲ್ಲಿ ಉಚಿತ ಪಡಿತರ ವಿತರಣೆಯನ್ನು ವಿಸ್ತರಿಸಲು ದೆಹಲಿ ಸರ್ಕಾರ ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಿಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಉಪ ನಾಯಕ
ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಕೆಎಲ್ ರಾಹುಲ್ ಉಪ ನಾಯಕತ್ವದ ಕ್ಯಾಪ್ ತೊಡಲಿದ್ದಾರೆ.

ದೇಶದ 11 ರಾಜ್ಯಗಳಲ್ಲಿ 101 ಓಮಿಕ್ರಾನ್ ಪ್ರಕರಣ ಪತ್ತೆ: ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ
ಇಲ್ಲಿಯವರೆಗೂ ದೇಶದಲ್ಲಿನ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 101 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.

ರಮೇಶ್ ಕುಮಾರ್ ಹೇಳಿಕೆ ಅತ್ಯಂತ ದುಃಖಕರ, ದುರದೃಷ್ಟ, ಅಸಹ್ಯಕರ: ರಾಷ್ಟ್ರೀಯ ಮಹಿಳಾ ಆಯೋಗ ಖಂಡನೆ
ಅತ್ಯಾಚಾರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು"ಅತ್ಯಂತ ದುಃಖಕರ, ದುರದೃಷ್ಟದ ಹೇಳಿಕೆಯಾಗಿದೆ. ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ ಎಂದಿದ್ದಾರೆ.

ಬೂಸ್ಟರ್ ಡೋಸ್ ಕುರಿತು ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ: ಪೂನಾವಾಲ
ಪ್ರತಿದಿನ 8 ಸಾವಿರದಿಂದ 10 ಸಾವಿರ ಹೊಸ ಪ್ರಕರಣಗಳೊಂದಿಗೆ ಭಾರತ ಉತ್ತಮ ಸ್ಥಾನದಲ್ಲಿದೆ. ಅದರಲ್ಲಿ ಬಹುತೇಕ ಡೆಲ್ಟಾ ರೂಪಾಂತರಿಗಳಾಗಿವೆ ಎಂದು ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಮಂಗಳವಾರ ಹೇಳಿದ್ದಾರೆ.

