Newdelhi

ಅಕ್ಟೋಬರ್ 24 ರಂದು ಭಾರತ- ಪಾಕ್ ನಡುವಣ ಟಿ-20 ವಿಶ್ವಕಪ್ ಪಂದ್ಯ ಸಾಧ್ಯತೆ
ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವಣ ಅಕ್ಟೋಬರ್ 24 ಭಾನುವಾರದಂದು ಟಿ-20 ವಿಶ್ವ ಕಪ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಇನ್ನೂ ಕೆಲ ದಿನಗಳಲ್ಲಿ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಲಿದೆ.

ಸಚಿವ ಸಂಪುಟ ರಚನೆ: ಬುಧವಾರ ಬೆಳಗ್ಗೆ ವರಿಷ್ಠರಿಂದ ಶುಭ ಸೂಚನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಹು ನಿರೀಕ್ಷಿತ ನೂತನ ಸಚಿವ ಸಂಪುಟ ರಚನೆ ಕುರಿತಂತೆ ಬುಧವಾರ ಬೆಳಗ್ಗೆ ಅಂತಿಮವಾಗಿ ವರಿಷ್ಠರಿಂದ ಶುಭ ಸೂಚನೆ ಸಿಗಲಿದೆ. ನಂತರ ಪಟ್ಟಿ ಪ್ರಕಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಭೇಟಿ ಮಾಡಿದ ಶರದ್ ಪವಾರ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿ ಮಾಡಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿದ್ದು, ಹಲವು ವಿಷಯಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ.

ಸಚಿವ ಸಂಪುಟ ರಚನೆ: ಮಂಗಳವಾರ ರಾತ್ರಿಯೊಳಗೆ ಹೈಕಮಾಂಡ್ ಅಂತಿಮ ಪಟ್ಟಿ ಬಿಡುಗಡೆ ಸಾಧ್ಯತೆ- ಮುಖ್ಯಮಂತ್ರಿ ಬೊಮ್ಮಾಯಿ
ರಾಜ್ಯ ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ಮಂಗಳವಾರ ರಾತ್ರಿಯೊಳಗೆ ಹೈಕಮಾಂಡ್ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಆಫ್ರಿಕನ್ ಪ್ರಜೆಗಳಿಂದ ಅನಗತ್ಯವಾಗಿ ಪೊಲೀಸರ ಮೇಲೆ ಹಲ್ಲೆ, ಎನ್ ಡಿಪಿಎಸ್ ಕಾಯ್ದೆಯಡಿ ಬಂಧನ- ಸಿಎಂ ಬೊಮ್ಮಾಯಿ
ಕರ್ನಾಟಕದಲ್ಲಿರುವ ಆಫ್ರಿಕನ್ ಪ್ರಜೆಗಳು ಹಿಂಸಾತ್ಮಕವಾಗಿ ವರ್ತಿಸಿದ್ದರಿಂದ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಪ್ರಧಾನಿ ಮೋದಿ, ಶಾ ಸಮ್ಮುಖದಲ್ಲಿ ಪೆಗಾಸಸ್ ಹಗರಣ ಕುರಿತ ಚರ್ಚೆಯನ್ನು ಪ್ರತಿಪಕ್ಷಗಳು ಬಯಸಿವೆ- ಟಿಎಂಸಿ
ರಾಷ್ಟ್ರೀಯ ಭದ್ರತೆ ಮತ್ತು ಪೆಗಾಸಸ್ ವಿಚಾರವನ್ನು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಚರ್ಚಿಸಲು ಇಡೀ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ ಎಂದು ತೃಣಮೂಲ ಕಾಂಗ್ರೆಸ್ ಸೋಮವಾರ ಹೇಳಿದೆ.

ಸಂಸದನಾಗಿರುತ್ತೀನಿ ಆದರೆ ಹೆಚ್ಚು ದಿನ ರಾಜಕೀಯದಲ್ಲಿ ಇರಲ್ಲ- ಬಾಬುಲ್ ಸುಪ್ರಿಯೋ
ಗಾಯಕ ಬಾಬುಲ್ ಸುಪ್ರಿಯೋ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡದಂತೆ ಮನವೊಲಿಸುವಲ್ಲಿ ಭಾರತೀಯ ಜನತಾ ಪಾರ್ಟಿ ಸೋಮವಾರ ಯಶಸ್ವಿಯಾಗಿದೆ.

ಕೋವಾಕ್ಸಿನ್ ಗೆ ಕೋವಿಡ್-19 ರೂಪಾಂತರ ಡೆಲ್ಟಾ ಪ್ಲಸ್ ತಡೆಯುವ ಸಾಮರ್ಥ್ಯವಿದೆ- ಐಸಿಎಂಆರ್ ಅಧ್ಯಯನ
ಸ್ವದೇಶಿ ನಿರ್ಮಿತ ಕೋವಾಕ್ಸಿನ್ ಲಸಿಕೆಗೆ ಕೋವಿಡ್-19 ರೂಪಾಂತರ ಡೆಲ್ಟಾ ಪ್ಲಸ್ ತಡೆಯುವ ಸಾಮರ್ಥ್ಯ ಇರುವುದು ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಲಸಿಕೆ ಲಭ್ಯತೆ ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಮಾಂಡವೀಯಾ
ದೇಶದಲ್ಲಿ ಲಸಿಕೆ ಅಭಿಯಾನ ಈ ತಿಂಗಳಲ್ಲಿ ಮತ್ತಷ್ಟು ಉತ್ತೇಜನ ಪಡೆಯಲಿದೆ ಎಂದು ಭಾನುವಾರ ಹೇಳಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಸರ್ಕಾರದ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

