Newdelhi

ಪ್ರತಿಭಟನಾ ಮೆರವಣಿಗೆಗಾಗಿ ರೈತರ ವಿರುದ್ಧದ ಕೇಸ್ ಹಿಂಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯ
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧದ ಏಳು ತಿಂಗಳ ಹೋರಾಟದ ಅಂಗವಾಗಿ ಶನಿವಾರ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ರೈತರ ಮೇಲೆ ದಾಖಲಾಗಿರುವ ಕೇಸ್ ಗಳನ್ನು ವಾಪಸ್ ಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಒತ್ತಾಯಿಸಿದೆ.

ಡೆಲ್ಟಾ ಪ್ಲಸ್ ರೂಪಾಂತರ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ- ವೈದ್ಯರು
ಡೆಲ್ಟಾ ಪ್ಲಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕವಾದದ್ದು ಆದರೆ,ಭಯಪಡಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಮಾಜಿ ಡಾ.ರಾಮನ್ ಗಂಗಖೇಡ್ಕರ್ ಭಾನುವಾರ ಹೇಳಿದ್ದಾರೆ.

ಕೋವಿಡ್ ಅನ್ ಲಾಕ್: ದೆಹಲಿಯಲ್ಲಿ ನಾಳೆಯಿಂದ ಜಿಮ್ ಗಳು ಪುನರಾರಂಭ
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಇಳಿಕೆ ಮುಂದುವರೆದಿದ್ದು, ಮುಂದಿನ ವಾರಕ್ಕಾಗಿ ಹೊಸ ಸಡಿಲಿಕೆಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.

ಜುಲೈ 31 ರೊಳಗೆ 51.6 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದ್ದು, ಈಗಾಗಲೇ 35.6 ಕೋಟಿ ಪೂರೈಕೆ- ಸುಪ್ರೀಂಗೆ ಕೇಂದ್ರ ಮಾಹಿತಿ
ಜುಲೈ 31ರೊಳಗೆ 51.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಅದರಲ್ಲಿ ಈಗಾಗಲೇ 35.6 ಕೋಟಿಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂಕೋರ್ಟ್ ಗೆ ಹೇಳಿದೆ.

ಕೋವಿಶೀಲ್ಡ್, ಕೋವಾಕ್ಸಿನ್ ಎಲ್ಲಾ ಕೊರೋನಾ ರೂಪಾಂತರಗಳ ವಿರುದ್ಧ ಕೆಲಸ ಮಾಡುತ್ತದೆ: ಕೇಂದ್ರ ಸರ್ಕಾರ
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಎಲ್ಲಾ ಕೊರೋನಾ ರೂಪಾಂತರ ವಿರುದ್ಧ ಕಾರ್ಯನಿರ್ವಹಿಸಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಶುಕ್ರವಾರ ಹೇಳಿದ್ದಾರೆ.

ಪಾರದರ್ಶಕವಾಗಿ ರಾಜ್ಯವ್ಯಾಪಿ ಲಸಿಕೆ ವಿತರಣೆ; ಮಾಧ್ಯಮಗಳ ಆರೋಪ ನಿರಾಧಾರ: ಕೇಂದ್ರ ಸರ್ಕಾರ
ರಾಜ್ಯಗಳಿಗೆ ಪಾರದರ್ಶಕವಾಗಿ ಕೋವಿಡ್ ಲಸಿಕೆಗಳನ್ನು ವಿತರಣೆ ಮಾಡಿಲ್ಲ ಎಂಬ ಮಾಧ್ಯಮಗಳ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

ಸಿಬಿಎಸ್ ಇ, ಐಸಿಎಸ್ ಇ 12ನೇ ತರಗತಿಗೆ ಮೌಲ್ಯಮಾಪನ ಸೂತ್ರ: ಹಸ್ತಕ್ಷೇಪಕ್ಕೆ ಸುಪ್ರೀಂ ನಕಾರ
12 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಸಿಬಿಎಸ್ಇ ಮತ್ತು ಸಿಐಎಸ್ಸಿಇ ಎರಡೂ ಪ್ರಸ್ತಾಪಿಸಿರುವ ಮೌಲ್ಯಮಾಪನ ಸೂತ್ರದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕೋವಿಡ್-19 ಸಾಂಕ್ರಾಮಿಕ ಕಾರಣದಿಂದಾಗಿ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.

ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ಕೋವಿಡ್-19 ಮೂರನೇ ಅಲೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ: ಐಐಟಿ ಕಾನ್ಪುರ ಅಧ್ಯಯನ
ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೋವಿಡ್-ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ.

ಕೋವಿಡ್-19: ಮೃತರ ಕುಟುಂಬದವರಿಗೆ 4 ಲಕ್ಷ ರೂ.ಪರಿಹಾರ ಪಾವತಿ ಸಾಧ್ಯವಿಲ್ಲ, ಸುಪ್ರೀಂಗೆ ಕೇಂದ್ರಸರ್ಕಾರ ಅಫಿಡವಿಟ್
ಕೋವಿಡ್-19 ಸಾಂಕ್ರಾಮಿಕದಿಂದ ಸಾವ್ನಪ್ಪಿದವರಿಗೆ 4 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.

