Newdelhi

ಕೋವಿಡ್-19 ತಡೆಗೆ ಗುಡುಚಿ, ಅಶ್ವಗಂಧ ಆಯುಷ್-64 ಬಳಸಲು ಕೇಂದ್ರ ಸರ್ಕಾರ ಶಿಫಾರಸು
ಕೋವಿಡ್-19 ಲಸಿಕೆಯ ಪ್ರಯೋಗದ ಹಂತಗಳು ಇನ್ನೂ ಮುಂದುವರೆದಿದ್ದು, ಲಘು ಮತ್ತು ಲಕ್ಷಣ ರಹಿತ ಕೋವಿಡ್-19 ರೋಗಿಗಳಿಗೆ ಸಾಮಾನ್ಯ ಆಯುರ್ವೇದಿಕ್ ಮೂಲಿಕೆಗಳಾಗಿರುವ ಗುಡುಚಿ, ಅಶ್ವಗಂಧ ಆಯುಷ್-64ನ್ನು ಬಳಸಲು ಕೇಂದ್ರ ಸರ್ಕಾರ ಮಂಗಳವಾರ ಶಿಫಾರಸು ಮಾಡಿದೆ.

ದೇಶದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿ ಟಬು, ತಾಪ್ಸಿ, ಅನುಷ್ಕಾಗೆ ಸ್ಥಾನ
ಆನ್ ಲೈನ್ ಹುಡುಕಾಟದಲ್ಲಿ ದೇಶದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್ ತಾರೆಗಳಾದ ಟಬು, ತಾಪ್ಸೀ ಪನ್ನು, ಅನುಷ್ಕಾ ಶರ್ಮಾ ಮತ್ತು ಸೋನಾಕ್ಷಿ ಸಿನ್ಹಾ ಸ್ಥಾನ ಪಡೆದಿದ್ದಾರೆ. ಆದರೆ, ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಹತ್ರಾಸ್ ಪ್ರಕರಣ: ಸಾಕ್ಷಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಗುರುವಾರದೊಳಗೆ ತಿಳಿಸಿ, ಉ.ಪ್ರ. ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ಸಾಕ್ಷಿಗಳನ್ನು ರಕ್ಷಿಸಲು ಕೈಗೊಂಡ ಕ್ರಮಗಳ ಕುರಿತ ಗುರುವಾರದೊಳಗೆ ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಇಡೀ ದೇಶಕ್ಕೆ ಹೊಡೆತ ಬೀಳುತ್ತಿರುವಾಗ ಪೊಲೀಸರು ನನ್ನನ್ನು ತಳ್ಳಿದ್ದು ದೊಡ್ಡ ವಿಷಯವಲ್ಲ: ರಾಹುಲ್ ಗಾಂಧಿ
ಇಡೀ ದೇಶಕ್ಕೆ ಹೊಡೆತ ಬೀಳುತ್ತಿರುವಾಗ, ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗುವಾಗ ಪೊಲೀಸರು, ನನ್ನನ್ನು ತಳ್ಳಿದ್ದು ದೊಡ್ಡ ವಿಷಯವೇನಲ್ಲಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಹತ್ರಾಸ್ ಘಟನೆ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಬೇಕು- ಭೀಮ್ ಆರ್ಮಿ ಮುಖ್ಯಸ್ಥ ಒತ್ತಾಯ
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಮತ್ತು ರಾತ್ರೋರಾತ್ರಿ ಮೃತದೇಹವನ್ನು ಪೊಲೀಸರು ಅಂತ್ಯಸಂಸ್ಕಾರ ಮಾಡಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಒತ್ತಾಯಿಸಿದ್ದಾರೆ.

ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಹಸ್ತಾಂತರದಿಂದ ಸಣ್ಣ ರೈತರನ್ನು ರಕ್ಷಿಸುವವರು ಯಾರು? ಸೋನಿಯಾ ಗಾಂಧಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳಿಂದ ರೈತರ ಭೂಮಿಯನ್ನು ಕೃಷಿಗಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತದೆ. ಆಗ ಕೋಟ್ಯಂತರ ಸಣ್ಣ ರೈತರನ್ನು ಯಾರು ರಕ್ಷಿಸುತ್ತಾರೆ? ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ಕೋವಿಡ್-19: 'ಅಸಮರ್ಪಕ ನಿರ್ವಹಣೆ' ಕುರಿತು ಸ್ವತಂತ್ರ ತನಿಖೆಗಾಗಿ ಸಲ್ಲಿಸಿದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ ಎಂದು ಆರೋಪಿಸಿ ನಿವೃತ್ತ ಅಧಿಕಾರಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬಿನಿಂದ 'ಕಿಸಾನ್ ಯಾತ್ರಾ' ಬೃಹತ್ ಪ್ರತಿಭಟನೆ: ಕಾಂಗ್ರೆಸ್ ಆಯೋಜನೆ
ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಪಂಜಾಬಿನಿಂದ 'ಕಿಸಾನ್ ಯಾತ್ರಾ' ಬೃಹತ್ ಪ್ರತಿಭಟನೆಯನ್ನು ಆಯೋಜಿಸುತ್ತಿದೆ.

ಮುಂದಿನ ವರ್ಷ ಭಾರತದಲ್ಲಿಯೇ ಇಂಗ್ಲೆಂಡ್ ವಿರುದ್ಧದ ಸರಣಿ ಆಯೋಜನೆ ಸಾಧ್ಯತೆ: ಗಂಗೂಲಿ
ಭಾರತದಲ್ಲಿಯೇ ಇಂಗ್ಲೆಂಡ್ನೊಂದಿಗಿನ ಸರಣಿ ನಡೆಸುವುದು ಮೊದಲ ಆದ್ಯತೆಯಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

