Newdelhi

ಬಿಹಾರ: ಅನಿಶ್ಚಿತತೆಯಲ್ಲಿ ಎನ್ಡಿಎ ಭವಿಷ್ಯ; ಜೆಡಿಯು ಸಭೆಗೂ ಮುನ್ನ ಬಿಜೆಪಿ ಎಚ್ಚರಿಕೆಯ ಹೆಜ್ಜೆ
ಬಿಜೆಪಿಯೊಂದಿಗೆ ಜೆಡಿಯು ಸಂಬಂಧ ಹದಗೆಟ್ಟಿರುವಂತೆಯೇ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಪಕ್ಷದ ಸಂಸದರು ಮತ್ತು ಶಾಸಕರ ಸಭೆ ಕರೆದಿದ್ದಾರೆ. ಈ ಮಧ್ಯೆ ಬಿಹಾರದಲ್ಲಿ ಮೈತ್ರಿ ಧರ್ಮ ಪಾಲಿಸಲಾಗುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಗೆ ಹಾಲಿವುಡ್ ಸ್ಟಾರ್ ಬೆಂಬಲ!
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಹಾಲಿವುಡ್ ಸ್ಟಾರ್ ಜಾನ್ ಕ್ಯುಸಾಕ್ ಶನಿವಾರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ರೇಸ್ ನಲ್ಲಿ ದಿಗ್ವಿಜಯ್ ಸಿಂಗ್, ನಾಳೆ ನಾಮಪತ್ರ ಸಲ್ಲಿಕೆ ಸಾಧ್ಯತೆ
ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಕೂಡಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಅಶೋಕ್ ಗೆಹ್ಲೋಟ್ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ನಂತರ ಹಿಂದೆ ಸರಿಯುವುದು ಬಹುತೇಕ ನಿಶ್ಚಿತವಾಗಿದ್ದು, ಇದೀಗ ದಿಗ್ವಿಜಯ್ ಸಿಂಗ್ ಕೂಡಾ ಈ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ರಾಷ್ಟ್ರ ಲಾಂಛನದಲ್ಲಿ ಉಗ್ರಾವತರಾದ ಸಿಂಹಗಳು: ಪ್ರತಿಪಕ್ಷಗಳು, ಸಾಮಾಜಿಕ ಹೋರಾಟಗಾರ ಆಕ್ಷೇಪ
ಆಕರ್ಷಕ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಉಗ್ರವತಾರದ ಸಿಂಹದ ಭಂಗಿ ಹೊಂದಿರುವ ಲಾಂಛನವನ್ನು ಬದಲಾಯಿಸುವ ಮೂಲಕ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಸಾಮಾಜಿಕ ಹೋರಾಟಗಾರರು ಆಕ್ಷೇಪಿಸಿದ್ದಾರೆ.

ಸಾಗರೋತ್ತರ ಉಸ್ತುವಾರಿ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಹಿಮಾನ್ಶು ವ್ಯಾಸ್ ರಾಜೀನಾಮೆ
ಗುಜರಾತ್ ವಿಧಾನಸಭಾ ಚುನಾವಣೆ ರಂಗೇರುತ್ತಿರುವಂತೆಯೇ, ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಬಿದ್ದಿದೆ.

ಅಮೆರಿಕಕ್ಕೆ ತೆರಳದಂತೆ ಕಾಶ್ಮೀರಿ ಪತ್ರಕರ್ತೆಯನ್ನು ವಿಮಾನ ನಿಲ್ದಾಣದಲ್ಲಿ ತಡೆದ ಅಧಿಕಾರಿಗಳು
ಪುಲಿಟ್ಜರ್ ಪ್ರಶಸ್ತಿ ವಿಜೇತ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅಮೆರಿಕಕ್ಕೆ ತೆರಳದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದಾರೆ.

ಭಾರತೀಯ ಮಹಿಳಾ ಹಾಕಿ ತಂಡ ಚಾಣಾಕ್ಷತನದಿಂದ ಆಡಿದೆ, ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿತು: ಪ್ರಧಾನಿ ಮೋದಿ
ಭಾರತದ ಹಾಕಿ ತಂಡಗಳ "ಅದ್ಭುತ" ಪ್ರದರ್ಶನ ಜನರು ಟೋಕಿಯೊ ಒಲಂಪಿಕ್ಸ್ ಅನ್ನು ನೆನಪಿಟ್ಟುಕೊಳ್ಳುವ ವಿಷಯಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ: ದೋಷಪೂರಿತ, ಅವೈಜ್ಞಾನಿಕ ಮಾನದಂಡ- ಕೇಂದ್ರ ಸರ್ಕಾರ
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನದಲ್ಲಿರುವುದು ಜನರಿಗೆ ಆಹಾರ ಭದ್ರತೆ ಮತ್ತು ಅದರ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸದ ರಾಷ್ಟ್ರ ಎಂಬ ದೇಶದ ವರ್ಚಸ್ಸನ್ನು ಕಳಂಕಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ಬ್ಯಾನ್: ಫಿಫಾ ಅತ್ಯಂತ ಕಠಿಣ ನಿರ್ಧಾರ- ಬೈಚುಂಗ್ ಭುಟಿಯಾ
ಭಾರತೀಯ ಫುಟ್ ಬಾಲ್ ಫೆಡರೇಶನ್ ನಿಷೇಧಿಸಿರುವ ಫಿಫಾ ನಿರ್ಧಾರ ಅತ್ಯಂತ ಕಠಿಣವಾದದ್ದು ಎಂದು ಮಾಜಿ ನಾಯಕ ಬೈಚುಂಗ್ ಭುಟಿಯಾ ಮಂಗಳವಾರ ಹೇಳಿದ್ದಾರೆ.

