passes away

ನನ್ನ ಜೀವನದ ಅರ್ಧ ಭಾಗವೇ ನನ್ನನ್ನು ಅಗಲಿದಂತಾಗಿದೆ; ಇನ್ನಷ್ಟು ವರ್ಷ ನಿನ್ನೊಂದಿಗೆ ಬದುಕುವ ಆಸೆಯಿತ್ತು: ಡಿ.ಸಿ ತಮ್ಮಣ್ಣ ಪೋಸ್ಟ್!
ನನ್ನ ಪ್ರತಿಯೊಂದು ಉಸಿರಿಗೂ ಉಸಿರಾಗಿ, ನನ್ನ ಸುಖದಲ್ಲಿ ಸಂತೋಷವನ್ನು ಕಂಡು, ನನ್ನ ದುಃಖದಲ್ಲಿ ಕಣ್ಣೀರಾಗಿ, ನನ್ನ ಕಷ್ಟಗಳಲ್ಲಿ ಧೈರ್ಯವಾಗಿ, ನನ್ನ ಸಾಧನೆಗಳಲ್ಲಿ ಬೆನ್ನೆಲುಬಾಗಿ ನಿಂತ ನನ್ನ ಪ್ರೀತಿಯ ಅರ್ಧಾಂಗಿ .

ತಮಿಳುನಾಡು: ಮಾಜಿ ಸಿಎಂ MK ಸ್ಟಾಲಿನ್ ಸೋಲಿಸಿದ್ದ ಕೊಲತ್ತೂರು TVK ಶಾಸಕ ವಿ.ಎಸ್ ಬಾಬು ನಿಧನ
2 ತಿಂಗಳಿನಿಂದ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ 2.24ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

'A' ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!
1998ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ಎ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಘೋರ ದುರಂತ: ಗಣೇಶ ಪೂಜೆಗೆ ನೀರು ತರುವಾಗ ಬಾವಿಗೆ ಬಿದ್ದು ಕೃಷಿ ವಿಜ್ಞಾನಿ ಡಾ. ಮಂಜುನಾಥ ನಾಯ್ಕ ಸಾವು!
ಕೃಷಿ ವಿಜ್ಞಾನಿಯಾಗಿ, ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧನಾರ್ಥಿಗಳಿಗೆ ಗುರುಗಳಾಗಿ ಮತ್ತು ಕೃಷಿಕರಿಗೆ ಉತ್ತಮ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದ ಮಂಜುನಾಥ ಅವರು ಗಣೇಶ ಹಬ್ಬಕ್ಕೆ ಊರಿಗೆ ಹೋಗಿದ್ದರು.

ಬಾಲಿವುಡ್ ನಟಿ ಅರುಣಾ ಇರಾನಿ ಪತಿ, ನಿರ್ದೇಶಕ ಕುಕು ಕೊಹ್ಲಿ ವಿಧಿವಶ
ಅರುಣಾ ಇರಾನಿ ಅವರ ಪತಿ ಕುಕು ಕೊಹ್ಲಿ ಅವರಿಗೆ ಸೋಮವಾರ ರಾತ್ರಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಸಣ್ಣ ಪ್ರಮಾಣದ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

BJP ಹಿರಿಯ ನಾಯಕ ರಾಮಚಂದ್ರೇಗೌಡ ವಿಧಿವಶ: ತಳಮಟ್ಟದಿಂದ ಪಕ್ಷ ಕಟ್ಟಲು ಯಡಿಯೂರಪ್ಪಗೆ ಸಾಥ್ ನೀಡಿದ್ದ ಧುರೀಣ!
ಆರ್ಎಸ್ಎಸ್ ಹಿನ್ನೆಲೆ ಹೊಂದಿದ್ದ ರಾಮಚಂದ್ರೇಗೌಡರು, 1953ರಲ್ಲೇ ಸಂಘವನ್ನು ಸೇರುವ ಮೂಲಕ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದರು. ತದನಂತರ 1970 ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದರು.

ಬೆಂಗಳೂರಿನ ಖ್ಯಾತ ಉರಗ ರಕ್ಷಕ ‘ಸ್ನೇಕ್ ಅನೀಸ್’ ಇನ್ನಿಲ್ಲ..!
ಉಸಿರಾಟದ ತೊಂದರೆ ಹಾಗೂ ಉಸಿರಾಟದ ಸೋಂಕಿನಿಂದ ಕಳೆದ 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪಿ.ಲಂಕೇಶ್ ಪತ್ನಿ, ಲೇಖಕಿ ಇಂದಿರಾ ಲಂಕೇಶ್ ನಿಧನ; ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ
ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಸಿದ್ಧ ತಮಿಳು ಸಿನಿಮಾ ನಿರ್ದೇಶಕ ಭಾರತಿರಾಜ ವಿಧಿವಶ: ಪುಟ್ಟಣ್ಣ ಕಣಗಾಲ್ ನೆಚ್ಚಿನ ಶಿಷ್ಯರಾಗಿದ್ದ ಭಾರತಿರಾಜ!
ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ (ಜೂನ್ 10) ಮುಂಜಾನೆ ಅವರು ಕೊನೆಯುಸಿರೆಳೆದರು. ಅವರ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

