Police, locals

ಸೆಲ್ಫಿ ವಿಡಿಯೋ ಕೇಸ್: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ನಟಿ ಸಂಜನಾ
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ, ಕಾರು ಚಲಾಯಿಸುತ್ತಿದ್ದಾಗ ಸೆಲ್ಫಿ ವಿಡಿಯೋ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದಾರೆ.

ಪಟಾಕಿ ಸಿಡಿತ ಎಂದ ಪೊಲೀಸರ ವರದಿ ತಿರಸ್ಕರಿಸಿದ ಹ್ಯಾರಿಸ್, ತನಿಖೆಗೆ ಆಗ್ರಹ
ಸಿಡಿದಿದ್ದು ಪಟಾಕಿಯೇ ಹೊರತು ಯಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂಬ ಪೊಲೀಸರ ತನಿಖಾ ವರದಿಯನ್ನು ತಿರಸ್ಕರಿಸಿರುವ ಶಾಸಕ ಹ್ಯಾರಿಸ್ ಅವರು, ತನಿಖೆಗೆ ಆಗ್ರಹಿಸಿದ್ದಾರೆ.

ಶಾಸಕ ಹ್ಯಾರಿಸ್ ಗಾಯಗೊಂಡಿದ್ದು ಬಾಂಬ್ ಸ್ಫೋಟದಿಂದಲ್ಲ, ಪಟಾಕಿ ಸಿಡಿತದಿಂದ: ಪೊಲೀಸರ ತನಿಖೆಯಿಂದ ಖಚಿತ
ಶಾಂತಿನಗರದ ಕಾಂಗ್ರೆಸ್ ಶಾಸಕ ಎಸ್.ಎ.ಹ್ಯಾರಿಸ್ ಅವರು ಪಾಲ್ಗೊಂಡಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸ್ಫೋಟಗೊಂಡಿದ್ದು ಪಟಾಕಿಯೇ ಹೊರತು ಬೇರಾವುದೇ ಅನುಮಾನಾಸ್ಪದ ವಸ್ತುಗಳಲ್ಲ ಎಂದು ಪೊಲೀಸರು ತನಿಖೆಯಿಂದ ಖಚಿತಪಡಿಸಿದ್ದಾರೆ.

ಜೈಲಿನಿಂದ ಹೊರಬಂದ ಕೆಲ ಗಂಟೆಯಲ್ಲೇ ಹಾರ್ದಿಕ್ ಪಟೇಲ್‍ನನ್ನು ಮತ್ತೆ ಬಂಧಿಸಿದ ಪೊಲೀಸರು
ಪಟಿದಾರ್ ಮೀಸಲಾತಿ ಹೋರಾಟ ಸಮಿತಿಯ ಮಾಜಿ ಸಂಚಾಲಕ, ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಸಬರಮತಿ ಕೇಂದ್ರೀಯ ಕಾರಾಗೃಹದಿಂದ ಬಿಡುಗಡೆಗೊಂಡ ಕೂಡಲೇ ಅವರನ್ನು ಗುರುವಾರ ಪೊಲೀಸರು ಮರು ಬಂಧಿಸಿದ್ದಾರೆ.

ಮಂಗಳೂರು ಬಾಂಬ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು, ಆಟೋ ಚಾಲಕನ ವಿಚಾರಣೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬೆನ್ನುಬಿದ್ದಿರುವ ಪೊಲೀಸರು ಕರಾವಳಿ ಜಿಲ್ಲೆಗಳನ್ನೇ ಮುಖ್ಯವಾಗಿಟ್ಟುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಹಾಸನ: ಬಸ್ ನಿಲ್ದಾಣದಲ್ಲಿ ಗನ್, ಮಾರಕಾಸ್ತ್ರವಿದ್ದ ಬ್ಯಾಗ್ ಹಿಡಿದು ತಿರುಗಾಡುತ್ತಿದ್ದ ಉತ್ತರ ಭಾರತದವರನ್ನು ಬಂಧಿಸಿದ ಪೊಲೀಸರು!
ಬ್ಯಾಗ್ ಹಿಡಿದು ಶಂಕಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ದಾವಣಗೆರೆ: 'ಮೂಲ ನಕ್ಷತ್ರ'ದಲ್ಲಿ ಹುಟ್ಟಿತ್ತೆಂದು ಹೆಣ್ಣು ಮಗುವನ್ನು ಮಾರಾಟ ಮಾಡಿದ ಪೋಷಕರು
ಮೂಲ ನಕ್ಷತ್ರದಲ್ಲಿ ಹುಟ್ಟಿತ್ತೆಂಬ ಮೂಢನಂಬಿಕೆಯಿಂದ ಇಲ್ಲಿನ ಅಂಬೇಡ್ಕರ್ ನಗರದ ಪೋಷಕರು 1 ವರ್ಷದ ಹೆಣ್ಣು ಮಗುವನ್ನು ಮಕ್ಕಳಿಲ್ಲದ ಹಾವೇರಿಯ ದಂಪತಿಗೆ ಮಾರಾಟ ಮಾಡಿದ್ದಾರೆ.

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಹಂತಕರ ಮೇಲೆ ಪೊಲೀಸರಿಂದ ಗುಂಡಿನ ದಾಳಿ
ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಆರೋಪಿಸಿ ಮತೀನ್ ಎಂಬಾತನನ್ನು ಹತ್ಯೆ ಮಾಡಿದ್ದ ಆರೋಪಿಗಳ ಮೇಲೆ ಭಾರತೀನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, 4 ಲಕ್ಷ ಮೌಲ್ಯದ ಮಾಲು ವಶ!
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರೂ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

