ಜಾವಾ ಬೈಕ್ ಬಿಡುಗಡೆಗೆ ಕ್ಷಣಗಣನೆ: ಪ್ರಚಾರಕ್ಕೆ ಅಣ್ಣಾವ್ರ ಚಿತ್ರದ ಸನ್ನಿವೇಶ ಬಳಕೆ ಮಾಡಿದ ತಯಾರಿಕಾ ಸಂಸ್ಥೆ!

ಗತಕಾಲದ ವೈಭವವನ್ನು ಮತ್ತೆ ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿರುವ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಜಾವಾ, ತನ್ನನೂತನ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೂತನ ಮಾರ್ಗವನ್ನು ಆಯ್ದುಕೊಂಡಿದೆ.

Published: 13th November 2018 12:00 PM  |   Last Updated: 13th November 2018 07:41 AM   |  A+A-


As Jawa bikes ready To hit Market, Bike Manufacturer Company Used Rajkumar movie na ninna mareyalare scenes for promotion

ಸಂಗ್ರಹ ಚಿತ್ರ

Posted By : SVN
Source : Online Desk
ಬೆಂಗಳೂರು: ಗತಕಾಲದ ವೈಭವವನ್ನು ಮತ್ತೆ ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿರುವ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಜಾವಾ, ತನ್ನನೂತನ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೂತನ ಮಾರ್ಗವನ್ನು ಆಯ್ದುಕೊಂಡಿದೆ.

ಪಡ್ಡೆ ಹುಡುಗರು, ಯುವಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಜಾವಾ ಬೈಕ್​ ಇದೇ ನವೆಂಬರ್ 15ರಂದು ಹೊಸ ಅವತಾರದೊಂದಿಗೆ ಅನಾವರಣಗೊಳ್ಳುತ್ತಿದೆ. ಇನ್ನೇನು ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಸಿದ್ಧವಾಗಿರುವ ನೂತನ ಜಾವಾ ಬೈಕ್​ನ ಪ್ರಚಾರದಲ್ಲಿ ನಿರತವಾಗಿರುವ ಮಹೀಂದ್ರಾ ಸಂಸ್ಥೆ, ತನ್ನ ಪ್ರಚಾರ ಕಾರ್ಯಕ್ಕೆ ನೂತನ ವಿಧಾನವನ್ನು ಅಳವಡಿಸಿಕೊಂಡಿದ್ದು, ಡಾ.ರಾಜ್​ಕುಮಾರ್​  ಅಭಿನಯದ ‘ನಾ ನಿನ್ನ ಮರೆಯಲಾರೆ’ ಚಿತ್ರದ ಸಾಹಸ ದೃಶ್ಯದೊಂದಿಗೆ ಬೈಕ್​ನ ವೈಭವವನ್ನು ನೆನಪಿಸುವ ಕೆಲಸ ಮಾಡಿದೆ.

ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಮಹಿಂದ್ರಾ ಸಂಸ್ಥೆ, ತನ್ನ ಜಾವಾ ಮೋಟರ್​ ಸೈಕಲ್​ ಹೆಸರಿನ  ಟ್ವಿಟರ್,  ಫೇಸ್​ಬುಕ್​ ಮತ್ತು ಯ್ಯೂಟ್ಯೂಬ್​ ಚಾನೆಲ್​ಗಳಲ್ಲಿ ಈ ದೃಶ್ಯಗಳನ್ನು ಹಂಚಿಕೊಂಡಿದೆ. 

'ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ನಟ ರಾಜ್​ ಕುಮಾರ್​ ಅವರು ಬಳಸಿರುವುದು ಜಾವಾ ಬೈಕ್​ ಅನ್ನೇ. ಅಲ್ಲದೆ, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಜ್​ ತಮ್ಮ ಜಾವಾ ಬೈಕ್​ ಮೂಲಕ ರೈಲು ಬೆನ್ನು ಹತ್ತುತ್ತಾರೆ. ಬೆಟ್ಟಗುಡ್ಡಗಳು, ಕಾರು ಲಾರಿಗಳ ಮೇಲೆ ರಾಜ್​ ಕುಮಾರ್​ ಅವರು ಬೈಕ್​ ಅನ್ನು ಚಲಾಯಿಸುತ್ತಾರೆ. ಈ ದೃಶ್ಯ ಸಾಹಸಮಯವಾಗಿ ಕೂಡಿದ್ದು, ಆ ದೃಶ್ಯ ಎಂಥವರನ್ನೂ ಹಿಡಿದಿಟ್ಟುಕೊಳ್ಳುವಷ್ಟು ರೋಚಕವಾಗಿದೆ. ಹೀಗಾಗಿ ಮಹೀಂದ್ರ ಸಂಸ್ಥೆ ತನ್ನ ನೂತನ ಬೈಕ್​ನ ಪ್ರಚಾರಕ್ಕಾಗಿ ಮತ್ತು ಅದರ ಗತ ವೈಭವವನ್ನು ಸಾರುವ ಸಲುವಾಗಿ ರಾಜ್​ ಕುಮಾರ್​ ಅವರ ಚಿತ್ರದ ದೃಶ್ಯ ತುಣುಕನ್ನು ಬಳಸಿಕೊಂಡಿದೆ.

ತಿಂಗಳ ಹಿಂದೆ ಜಾವಾದ ಎಂಜಿನ್ ಮಾದರಿಯನ್ನು ಮಹೀಂದ್ರಾ ಸಂಸ್ಥೆ ಬಿಡುಗಡೆ ಮಾಡಿತ್ತು. ಈ ಹಿಂದಿನ ಬೈಕ್ ​ನ ಎಂಜಿನ್​ ಮಾದರಿಯಲ್ಲೇ ನೂತನ ಬೈಕ್ ನ ಎಂಜಿನ್​ ಅನ್ನೂ ಕೂಡ ವಿನ್ಯಾಸ ಮಾಡಿದ್ದರಿಂದ, ಹೊಸ ಬೈಕ್​ ಬಗ್ಗೆ ಯುವ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಈ ನಡುವೆ ನೂತನ ಜಾವಾದ ಪರೀಕ್ಷಾರ್ಥ ಬೈಕ್ ಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಆದರೂ, ಇದೇ ನವೆಂಬರ್ 15ರಂದು ಬೈಕ್​ನ ಮೂರು ಅವತರಣಿಕೆಗಳು ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ಬೈಕ್​ನ ಕುರಿತ ಕುತೂಹಲ ಇನ್ನೂ ಹಾಗೇ ಉಳಿದುಕೊಂಡಿದೆ.
Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp