ವಿಡಿಯೋ
ಇರಾನ್ ನೆಲದಲ್ಲಿ ಸಿಲುಕಿದ್ದ ಅಮೆರಿಕದ ವಾಯುಪಡೆಯ ಅಧಿಕಾರಿಯನ್ನು ರಕ್ಷಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ಅಮೆರಿಕದ ಯುದ್ಧ ವಿಮಾನ, F-15E ಸ್ಟ್ರೈಕ್ ಈಗಲ್ ಅನ್ನು ಶುಕ್ರವಾರ ದೇಶದ ನೈಋತ್ಯ ಭಾಗದ ಆಗಸದಲ್ಲಿ ಇರಾನ್ ಹೊಡೆದುರುಳಿಸಿತ್ತು
ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಅದರಿಂದ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.
ಪೈಲಟ್ ಅನ್ನು ತಕ್ಷಣ ರಕ್ಷಿಸಲಾಗಿದ್ದರೂ, ಇನ್ನೊಬ್ಬ ವಾಯುಪಡೆ ಸಿಬ್ಬಂದಿಗಾಗಿ ತುರ್ತು ಹುಡುಕಾಟವನ್ನು ಪ್ರಾರಂಭಿಸಲಾಗಿತ್ತು.
ವರದಿಗಳ ಪ್ರಕಾರ, ಯುಎಸ್ ಮತ್ತು ಇರಾನಿನ ಪಡೆಗಳು ಎರಡೂ ಅವರನ್ನು ತಲುಪಲು ಧಾವಿಸಿದ್ದವು. ಮೊದಲ ಸಿಬ್ಬಂದಿಯನ್ನು ತಕ್ಷಣವೇ ಪತ್ತೆಹಚ್ಚಲಾಯಿತು. ವಿಡಿಯೋ ಇಲ್ಲಿದೆ ನೋಡಿ.
Advertisement