ವಿಡಿಯೋ
ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಯುವಕನೊಬ್ಬ ಬಲಿಯಾದ ಆಘಾತಕಾರಿ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ನೆಲಮಂಗಲ ಮೂಲದ ಚಂದನ್ ಕುಮಾರ್(37) ಎಂದು ಗುರುತಿಸಲಾಗಿದೆ.
ಚಂದನ್ ಕುಮಾರ್ ಬೆಂಗಳೂರಿನ ನೆಲಮಂಗಲ ಮೂಲದ ತ್ಯಾಮಗೊಂಡ್ಲುವಿನ ನಿವಾಸಿ.
ರೆಕ್ಸ್‌ಡೇಲ್ ಬೌಲೆವಾರ್ಡ್ ಮತ್ತು ಹೆದ್ದಾರಿ 27 ಪ್ರದೇಶದಲ್ಲಿರುವ ವುಡ್‌ಬೈನ್ ಶಾಪಿಂಗ್ ಸೆಂಟರ್ ಬಳಿ ಈ ಘಟನೆ ನಡೆದಿದೆ.
ಕಳೆದ 6 ವರ್ಷಗಳಿಂದ ಚಂದನ್ ಕುಮಾರ್ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಿಡಿಯೋ ಇಲ್ಲಿದೆ ನೋಡಿ.
Advertisement