ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಗುರುವಾರದಂದು ಜಿಎಸ್‌ಟಿ ಮಂಡಳಿಯ ಸಭೆ ನಡೆಯಿತು.
ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಪಾಲ್ಗೊಂಡಿದ್ದರು.
ಜಿಎಸ್‌ಟಿ ಅಧಿಕಾರಿಗಳಿಗಿದ್ದ ಬಂಧನದ ಅಧಿಕಾರವನ್ನು ರದ್ದುಗೊಳಿಸಲು ಹಾಗೂ ಕಾನೂನು ಕ್ರಮ ಆರಂಭಿಸಲು ಇರುವ ಆರ್ಥಿಕ ಮಿತಿಯನ್ನು 1 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿಗೆ ಏರಿಸಲು ಸಭೆ ಅನುಮೋದನೆ ನೀಡಿತು.
ಕನಿಷ್ಠ ಶಿಕ್ಷೆಯ ನಿಯಮವನ್ನು ತೆಗೆದುಹಾಕಲಾಗಿದ್ದು, ದಂಡ, ಜೈಲು ಶಿಕ್ಷೆ ಅಥವಾ ಇವೆರಡನ್ನೂ ಒಳಗೊಂಡ ಶಿಕ್ಷೆಯನ್ನು ವಿಧಿಸುವ ನಿರ್ಧಾರವನ್ನು ಪ್ರತಿ ಪ್ರಕರಣದಲ್ಲೂ ನ್ಯಾಯಾಂಗದ ವಿವೇಚನೆಗೆ ಬಿಡಲಾಗಿದೆ ಎಂದು ಮಂಡಳಿ ನಿರ್ಧರಿಸಿದೆ.
ನಿರ್ದಿಷ್ಟ ದಂಡದ ನಿಬಂಧನೆ ಇಲ್ಲದ ಸಂದರ್ಭಗಳಲ್ಲಿ ಅನ್ವಯವಾಗುವ ಸಾಮಾನ್ಯ ದಂಡದ ಮೊತ್ತವನ್ನು 25,000 ರೂಪಾಯಿಯಿಂದ 10,000 ರೂಪಾಯಿಗೆ ಇಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನೋಂದಣಿ ಮತ್ತು ಮರುಪಾವತಿಗಳನ್ನು ಸರಳಗೊಳಿಸುವುದು ಸೇರಿಂತೆ ಹಲವಾರು ಪ್ರಕ್ರಿಯೆ ಸುಧಾರಣೆಗಳನ್ನು ಜಿಎಸ್‌ಟಿ ಕೌನ್ಸಿಲ್ ಅನುಮೋದಿಸಿದೆ. ವಿಡಿಯೋ ಇಲ್ಲಿದೆ ನೋಡಿ.