Watch | ಪ್ರತಿಭಟನೆಯಲ್ಲಿ ಭಾಗಿ: ನಟ ಇಮ್ರಾನ್ ಖಾನ್ ಗೆ ಭಾರತ ತೊರೆಯುವಂತೆ ನೋಟಿಸ್

ಮುಂಬೈನಲ್ಲಿ ಅಕ್ಟೋಬರ್ 10 ರಂದು ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ನಟ ಇಮ್ರಾನ್ ಖಾನ್ ಗೆ ಮುಂಬೈ ಪೊಲೀಸರು 'ಲೀವ್ ಇಂಡಿಯಾ' ನೋಟಿಸ್ ನೀಡಿದ್ದಾರೆ.

ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಪೊಲೀಸರು ನಟನಿಗೆ Leave India ನೋಟಿಸ್ ಜಾರಿ ಮಾಡಿದ್ದಾರೆ.

ಬಾಲಿವುಡ್‌ ನಟ ಇಮ್ರಾನ್ ಖಾನ್ ಭಾರತೀಯ ಮೂಲದವರಾಗಿದ್ದರೂ ಅಮೆರಿಕದ ಪೌರತ್ವ ಹೊಂದಿದ್ದಾರೆ. ಜೊತೆಗೆ ಭಾರತದ ಒಸಿಐ (OCI) ಕಾರ್ಡ್ ಪಡೆದಿದ್ದಾರೆ.

ವಲಸೆ ಕಾಯ್ದೆಯ ನಿಯಮಗಳ ಪ್ರಕಾರ, ವಿದೇಶಿ ಪೌರತ್ವ ಹೊಂದಿರುವ ವ್ಯಕ್ತಿಗಳು ಭಾರತದಲ್ಲಿ ಯಾವುದೇ ರಾಜಕೀಯ ಪ್ರತಿಭಟನೆ ಅಥವಾ ಧರಣಿಗಳಲ್ಲಿ ಭಾಗವಹಿಸುವಂತಿಲ್ಲ.

ಇದು ವಿದೇಶಿಯರ ಕಾನೂನಿನ ನೇರ ಉಲ್ಲಂಘನೆಯಾಗುವುದರಿಂದ ಪೊಲೀಸರು ಈ ಗಂಭೀರ ಕ್ರಮ ಕೈಗೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com