ಉದ್ಯೋಗಸ್ಥ ಮಹಿಳೆಗೆ ಪೂರಕ ವಾತಾವರಣ: ಸಿಕ್ಕಿಂ ಬೆಸ್ಟ್, ದೆಹಲಿ ಲಾಸ್ಟ್!

ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವಲ್ಲಿ ಈಶಾನ್ಯ ರಾಜ್ಯದ ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಕಳಪೆ ಸಾಧನೆ ಹೊಂದಿದೆ.
ಉದ್ಯೋಗಸ್ಥ ಮಹಿಳೆಗೆ ಪೂರಕ ವಾತಾವರಣ: ಸಿಕ್ಕಿಂ ಬೆಸ್ಟ್, ದೆಹಲಿ ಲಾಸ್ಟ್!
ಉದ್ಯೋಗಸ್ಥ ಮಹಿಳೆಗೆ ಪೂರಕ ವಾತಾವರಣ: ಸಿಕ್ಕಿಂ ಬೆಸ್ಟ್, ದೆಹಲಿ ಲಾಸ್ಟ್!
Updated on

ವಾಷಿಂಗ್ ಟನ್: ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವಲ್ಲಿ ಈಶಾನ್ಯ ರಾಜ್ಯದ ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಕಳಪೆ ಸಾಧನೆ ಹೊಂದಿದೆ.

ಅಮೆರಿಕ ಮೂಲದ ಚಿಂತಕರ ಚಾವಡಿಯಾಗಿರುವ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರ(ಸಿಎಸ್ಐಎಸ್) ಹಾಗೂ ನಾಥನ್ ಅಸೋಸಿಯೇಟ್ಸ್ ಜಂಟಿಯಾಗಿ ನಡೆಸಿದ ಅಧ್ಯಯನ ಪ್ರಕಾರ, ಭಾರತದಲ್ಲಿ ದುಡಿಯುವ ಮಹಿಳೆಯರಿಗೆ ಪೂರಕ ವಾತಾವರಣ ಕಲ್ಪಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕಿಂ ಮೊದಲ ಸ್ಥಾನ ಪಡೆದಿದೆ.

ಅಧ್ಯಯನ ವರದಿಯಲ್ಲಿ ಸಿಕ್ಕಿಂ ಗೆ 40 ಪಾಯಿಂಟ್ ರೇಟಿಂಗ್ ದೊರೆತಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಗೆ ಕೇವಲ 8.5 ರೇಟಿಂಗ್ ಪಾಯಿಂಟ್ ದೊರೆತಿದೆ. ಕೈಗಾರಿಕೆ, ಐಟಿ  ಉದ್ಯಮ ಕ್ಷೇತ್ರಗಳಲ್ಲಿ ಮಹಿಳೆಯರ ಕಾರ್ಯನಿರ್ವಹಿಸುವ  ಅವಧಿಗೆ ಸಂಬಂಧಿಸಿದ ಕಾನೂನು ನಿರ್ಬಂಧನೆಗಳು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕಿರುಕುಳ ಸೇರಿದಂತೆ ಕ್ರಿಮಿನಲ್ ಪ್ರಕರಣಗಳ ಬಗ್ಗೆ ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಸ್ಪಂದನೆ, ಒಟ್ಟಾರೆ ಉದ್ಯೋಗಸ್ಥರಲ್ಲಿ ಮಹಿಳೆಯರ ಶೇಕಡಾವಾರು ಸ್ಥಾನ. ಉದ್ಯೋಗದಲ್ಲಿ ಮಹಿಳೆಯರಿಗೆ ನಿಡಲಾಗುವ ಭಡ್ತಿ ಹಾಗೂ ಪ್ರೋತ್ಸಾಹಗಳ ಆಧಾರದ ಮೇಲೆ ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವ ರಾಜ್ಯವನ್ನು ಆಯ್ಕೆ ಮಾಡಲಾಗಿದೆ.

ಅಧ್ಯಯನದಲ್ಲಿ ಸಿಕ್ಕಿಂ ಗೆ ಮೊದಲ ಸ್ಥಾನ ನಂತರ ತೆಲಂಗಾಣ (28.5 ಪಾಯಿಂಟ್),  ಪುದುಚೇರಿ(25.6 ಪಾಯಿಂಟ್), ಕರ್ನಾಟಕ (24.7 ಪಾಯಿಂಟ್), ಹಿಮಾಚಲ ಪ್ರದೇಶ(24.2 ಪಾಯಿಂಟ್), ಆಂಧ್ರ ಪ್ರದೇಶ (24.0 ಪಾಯಿಂಟ್), ಕೇರಳ (22.2 ಪಾಯಿಂಟ್),ಮಹಾರಾಷ್ಟ್ರ (21.4 ಪಾಯಿಂಟ್) , ತಮಿಳುನಾಡು (21.1), ಹಾಗೂ ಛತ್ತೀಸ್ ಗಢ(21.1) ರಾಜ್ಯಗಳು ಮೊದಲ ಹತ್ತು ಸ್ಥಾನಗಳನ್ನು ಪಡೆದಿವೆ.

ಸಿಕ್ಕಿಂ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳು ನಾಡು ರಾಜ್ಯಗಳಲ್ಲಿ ಮಹಿಳೆಯರು ರಾತ್ರಿ ವೇಳೆ ಕಾರ್ಯನಿರ್ವಹಿಸುವುದಕ್ಕೆ ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ರಿಟೇಲ್ ಕ್ಷೇತ್ರದಲ್ಲಿ ರಾತ್ರಿ 10 ಗಂಟೆ ವರೆಗೆ ಮಾತ್ರ ಮಹಿಳೆಯರು ಕಾರ್ಯನಿರ್ವಹಿಸಬಹುದಾಗಿದೆ. 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ರಾತ್ರಿ ವೇಳೆ ಕೆಲಸ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ  ಎಂದು ಅಧ್ಯಯನ ವರದಿ ತಿಳಿಸಿದೆ. ನ್ಯಾಯವಿತರಣೆ ವ್ಯವಸ್ಥೆ, ನಿರ್ಬಂಧಗಳ ಪರಿಣಾಮವಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಕೊನೆಯ ಸ್ಥಾನ ಪಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com