ಮಹಿಳಾಪ್ರಧಾನ ಚಿತ್ರಗಳ ಮೂಲಕ ಚಿತ್ರರಂಗದಲ್ಲೂ ಮಿಂಚುತ್ತಿರುವ ಮಹಿಳಾಮಣಿಯರು

ಚಿತ್ರರಂಗದಲ್ಲಿ ಮಹಿಳಾ ಪ್ರಧಾನಚಿತ್ರಗಳ ಕೊರತೆಯಿದೆ ಎಂಬ ಕೂಗುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಮಾತುಗಳು ದೂರಾಗುತ್ತಿವೆ ಎಂದೆನಿಸತೊಡಗಿವೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿತ್ರರಂಗದಲ್ಲಿ ಮಹಿಳಾ ಪ್ರಧಾನಚಿತ್ರಗಳ ಕೊರತೆಯಿದೆ ಎಂಬ ಕೂಗುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಮಾತುಗಳು ದೂರಾಗುತ್ತಿವೆ ಎಂದೆನಿಸತೊಡಗಿವೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿವೆ. 

ಮಹಿಳೆಯರ ಸಾಧನೆ, ಮಹಿಳೆಯರ ಮೇಲಾಗುವ ದೌರ್ಜನ್ಯ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ, ಸಂದೇಶ ಹಾರುವ ಚಿತ್ರಗಳು ಚಿತ್ರರಂಗದಲ್ಲಿ ತೆರೆಕಾಣುತ್ತಿವೆ. ಇಂತಹ ಚಿತ್ರಗಳಲ್ಲಿ ಈ ಹಿಂದೆ ಹೊಸಮುಖಗಳ ನಾಯಕ ನಟಿಯಲು ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟಿಯರೂ ಕೂಡ ನಟಿಸಲು ಆರಂಭಿಸಿದ್ದಾರೆ. 

2020ನೇ ವರ್ಷವನ್ನು ಮಹಿಳಾ ಕೇಂದ್ರಿತ ಸಿನಿಮಾಗಳ ವರ್ಷವೆಂದೇ ಕರೆಯಬಹುದಾಗಿದೆ. ಏಕೆಂದರೆ. ಬಾಲಿವುಡ್ ಅಂಗಲದಲ್ಲಿ ಈಗಾಗಲೇ ನಾಯಕಿ ಪ್ರಧಾನ ಚಿತ್ರಗಳು ತೆರೆಕಂಡಿದ್ದು, ಯಶಸ್ಸು ಕಾಣುತ್ತಿವೆ. ಇದಲ್ಲದೆ, ಹಲವಾರು ಚಿತ್ರಗಳೂ ಕೂಡ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಅಂತಹ ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿರುವ ಚಪಾಕ್ ಮೊದಲನಯದ್ದಾಗಿದೆ. ಈ ಚಿತ್ರ ಜನವರಿ ತಿಂಗಳ ಮಧ್ಯದಲ್ಲಿ ಬಿಡುಗಡೆಯಾಗಿದ. ನಂತರ ಕಂಗನಾ ರನಾವತ್ ನಟಿಸಿರುವ ಪಂಗಾ ಸಿನಮಾ ತೆರೆ ಕಂಡಿದೆ. 

ಇನ್ನು ತಾಪ್ಸಿ ಪನ್ನು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಥಪ್ಪಡ್ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚೆಗೆಯನ್ನು ಗಳಿಸುತ್ತಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಮಹಿಳಾ ಪ್ರಧಾನ ಚಿತ್ರಗಳ ಕಿರು ಪರಿಚಯ ಈ ಕೆಳಕಂಡಂತಿವೆ...

ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್
ಐಎಎಫ್ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನ ಕಥೆಯಾಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಮೋಹಕ ತಾರೆ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರವನ್ನು ಶರಣ್ ಶರ್ಮಾ ನಿರ್ದೇಶಿಸಲಿದ್ದು, ಇದೇ ಏಪ್ರಿಲ್ 24ಕ್ಕೆ ಬಿಡುಗಡೆಯಾಗಲಿದೆ. 

ಗುಂಜನ್ ಅವರು ಶ್ರೀವಿದ್ಯಾ ರಾಜನ್ ಅವರೊಂದಿಗೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಯುದ್ಧ ವಲಯದಿಂದ ಸ್ಥಳಾಂತರ ಮಾಡುವ ಕೆಲಸವನ್ನು ಮಾಡಿದ್ದು. ಅವರ ಈ ಸಾಹಸಕ್ಕೆ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 

ತಲೈವಿ
ಪ್ರಸಕ್ತ ವರ್ಷ ಚಿತ್ರರಂದದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರಗಳಲ್ಲಿ ತಲೈವಿ ಕೂಡ ಒಂದಾಗಿದೆ. ಪ್ರಖ್ಯಾತ ನಟಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಈ ನಿಮಾಮ ಜೂನ್ 26ಕ್ಕೆ ಬಿಡುಗಡೆಗೊಳ್ಳುವ ನಿರೀಕ್ಷೆಗಳಿವೆ. 

ಜಯಲಲಿತಾ ಅವರ ಪಾತ್ರದಲ್ಲಿ ಕಂಗನಾ ರನಾವತ್ ಅವರು ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಪೋಸ್ಟರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. 

ಗಂಗೂಬಾಯಿ ಕಾಥಿಯಾವಾಡಿ
ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಿದ್ದಾರೆ. 1960ರ ದಶಕದಲ್ಲಿ ಮುಂಬೈನಲ್ಲಿ ಕುಖ್ಯಾತಿ ಪಡೆದಿದ್ದ ವೇಶ್ಯವಾಟಿಕೆ ನಡೆಸುತ್ತಿದ್ದ ಗಂಗೂಬಾಯಿ ಕೋಠಿವಾಲಿ ಬದುಕಿನ ಕುರಿತು ಹುಸೇನ್ ಝೈದಿ ಬರೆದಿರುವ ಕಾದಂಬರಿಯನ್ನು ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಸಿನಿಮಾಗೆ ಬಳಸಿಕೊಳ್ಳುತ್ತಿದ್ದಾರೆ. ಮ್ಯಾಡಂ ಆಫ್ ಕಾಮಾಟಿಪುರ ಎಂದೇ ಕರೆಸಿಕೊಳ್ಳುತ್ತಿದ್ದ ಗಂಗೂಬಾಯಿ, ಭೂಗತ ಜಗತ್ತನೊಂದಿಗೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಮುಂಬೈನಲ್ಲಿ ಅತ್ಯಂತ ಪ್ರಭಾವಶಾಲಿ ಮಹಿಳೆ ಎನಿಸಿಕೊಂಡಿದ್ದಳು.

ಶಕುಂತಲಾ ದೇವಿ
ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದ ಶಕುಂತಲಾ ದೇವಿ ಅವರ ಜೀವನ ಆಧಾರಿತ ಚಿತ್ರ ಇದಾಗಿದ್ದು, ಈ ಚಿತ್ರ ಮೇ.8ಕ್ಕೆ ಬಿಡುಗಡೆಯಾಗಲಿದೆ. ಶಂಕುತಲಾ ಪಾತ್ರದಲ್ಲಿ ವಿದ್ಯಾಬಾಲನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಅನು ಮನನ್ ಅವರು ನಿರ್ದೇಶಿಸುತ್ತಿದ್ದಾರೆ. ಲೇಖಕಿ ಹಾಗೂ ಗಣಿತ ತಜ್ಞೆಯಾಗಿದ್ದ ಶಂಕುತಲಾ ಅವರ ಹೆಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿದೆ. 

ಧಾಕಡ್
ಕಂಗನಾ ರನಾವತ್ ಅವರು ನಟಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದ್ದು, ಇದೂ ಕೂಡ ಮಹಿಳಾ ಪ್ರಧಾನ ಚಿತ್ರವಾಗಿದೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಕಂಗನಾ ಅವರು ಕುಂಗ್'ಫು ಕಲಿತಿದ್ದಾರೆಂದು ತಿಳಿದುಬಂದಿದೆ. 

ಗುಲ್ ಮಕೈ
ಹೆಣ್ಣು ಮಕ್ಕಳ ಶಿಕ್ಷಣದ ವಿಚಾರಕ್ಕೆ ಹೋರಾಟ ನಡೆಸುತ್ತಿರುವ ಹಾಗೂ ತಾಲಿಬಾನ್ ಉಗ್ರರಿಂದ ಗುಂಡೇಟು ತಿಂದ ಮಲಾಲ ಯೂಸುಫ್ ಜೈ ಜೀವನಾಧಾರಿತ ಚಿತ್ರ ಇದಾಗಿದ್ದು,  ಅಹ್ಮದ್ ಖಾನ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲ ನಟಿ ರೀಮಾ ಸಮೀರ್ಶೇಕ್ ನಟಿಸುತ್ತಿದ್ದಾರೆ. 

ಸೈನಾ
ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಟಿ ಪರಿಣತಿ ಚೋಪ್ರಾ ನಟಿಸುತ್ತಿದ್ದಾರೆ. ಅಮೋಲ್ ಗುಪ್ತಾ ನಿರ್ದೇಶನದ ಈ ನಿಮಾದಲ್ಲಿ ಸೈನಾ ಕೋಚ್ ಪುಲ್ಲೋಲ ಗೋಪಿಚಂದ್ ಪಾತ್ರಕ್ಕೆ ಮಾನವ್ ಕೌಲ್ ಬಣ್ಣ ಹಚ್ಚಿದ್ದಾರೆ. 

ಇವಿಷ್ಟು ಬಾಲಿವುಡ್ ಅಂಗಳದಲ್ಲಿ ಬಿಡುಗಡೆಯಾದ ಹಾಗೂ ಬಿಡುಗಡೆಯಾಗಲಿರುವ ಚಿತ್ರಗಳಾಗಿದ್ದರೆ, ಸ್ಯಾಂಡಲ್ ವುಡ್ ನಲ್ಲಿಯೂ ಮಹಿಳಾ ಪ್ರಧಾನ ಚಿತ್ರಗಳು ಬಿಡುಗಡೆಯಾದ ಹಾಗು ಬಿಡುಗಡೆಯಾಗುತ್ತಿರುವ ಸಾಲಿನಲ್ಲಿವೆ. 

ಪ್ರಿಯಾಂಕಾ ಉಪೇಂದ್ರ, ಹರಿಪ್ರಿಯಾ, ರಚಿತಾ ರಾಮ್, ರಾಧಿಕಾ ಕುಮಾರಸ್ವಾಮಿ, ರಾಗಿಣಿ ದ್ವಿವೇದಿ ಇನ್ನು ಅನೇಕ ಟಾಪ್ ನಟಿಯರು ಮಹಿಳಾ ಪ್ರಧಾನಚಿತ್ರಗಳಲ್ಲಿ ಅಭಿನಯಿಸಿದ್ದು, ಈಗಾಗಲೇ ಆ ಚಿತ್ರಗಳು ಬಿಡುಗಡೆಗೊಂಡಿವೆ. ಇನ್ನೂ ಸಾಲು ಸಾಲು ಮಹಿಳಾ ಪ್ರಧಾನ ಚಿತ್ರಗಳು ತೆರೆಗೆ ಬದಲು ಸಿದ್ಧವಾಗುತ್ತಿವೆ. 

ಏಪ್ರಿಲ್
ಏಪ್ರಿಲ್ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದು, ಥ್ರಿಲ್ಲಿಂಗ್ ಅಂಶಗಳನ್ನೊಳಗೊಂಡ ಚಿತ್ರ ಇದಾಗಿದೆ. ರಚಿತಾ ಅವರು ಚಿತ್ರದಲ್ಲಿ ಡಿಸೋಜ ಪಾತ್ರದಲ್ಲಿ ಕಾಣಸಿಕೊಂಡಿದ್ದು, ಮೊದಲ ಮಹಿಳಾ ಪ್ರಧಾನ ಚಿತ್ರಕ್ಕೆ ರಚಿತಾ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ ಒಂದು ನೈಜ ಘಟನೆಯಾಧಾರಿತ ಚಿತ್ರವಾಗಿದೆ. 

ಡಾಟರ್ ಆಫ್ ಪಾರ್ವತಮ್ಮ
ನಟಿ ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ಡಾಟರ್ ಆಫ್ ಪಾರ್ವತಮ್ಮ ಆಗಿದ್ದು, ಹರಿಪ್ರಿಯಾ ಜೊತೆಗೆ ಹಿರಿಯ ನಟಿ ಸುಮಲತಾ ಕೂಡ ಅಭಿನಯಿಸಿದ್ದಾರೆ. ಹರಿಪ್ರಿಯಾ ಅವರು ತನಿಖಾಧಿಕಾರಿ ವೈದೇಹಿ ಪಾತ್ರದಲ್ಲಿ ಕಾಣಿಸಿಕೊಕಂಡಿದ್ದರೆ, ಅಮ್ಮನ ಪಾತ್ರದಲ್ಲಿ ಸುಮಲತಾ ಅವರು ಕಾಣಿಸಿಕೊಳ್ಳಲಿದ್ದಾರೆ. 

ಹೌರಾ ಬ್ರಿಡ್ಜ್
ಹೌರಾ ಬ್ರಿಡ್ಜ್ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿದ್ದಾರೆ. ಹಲವು ನೈಜ ಘಟನೆಗಳನ್ನಿಟ್ಟುಕೊಂಡು ಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಚಿತ್ರವು ಕೋಲ್ಕತಾದ ಹೌರಾ ಬ್ರಿಡ್ಜ್ ಸುತ್ತಮುತ್ತಲಿನೊಂದಿಗೆ ಕತೆ ಸಾಗುತ್ತದೆ. 

ಬಟಲ್ ಫ್ಲೈ
ಬಟರ್ ಫ್ಲೈ ಚಿತ್ರ ಬಾಲಿವುಡ್'ನ ಕ್ವೀನ್ ಚಿತ್ರದ ರಿಮೇಕ್ ಆಗಿದ್ದು, ಬಾಲಿವುಡ್ ನಲ್ಲಿ ಕಂಗನಾ ರಣಾವತ್ ಅವರು ನಟಿಸಿದ್ದಾರೆ. ಇದೀಗ ಇದೇ ಪಾತ್ರದಲ್ಲಿ ಕನ್ನಡದಲ್ಲಿ ಪಾರುಲ್ ಯಾದವ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಹಳ್ಳಿ ಹುಡುಗಿಯೊಬ್ಭಳು ಹೇಗೆ ಒಂಟಿಯಾಗಿ ಜೀವನ ಮಾಡುತ್ತಾಳೆ ಎಂಬುವಂತಹ ಕಥೆ ಚಿತ್ರದ್ದಾಗಿದೆ. 

ಭೈರಾದೇವಿ
ಭೈರಾದೇವಿ ಚಿತ್ರ ವಿಭಿನ್ನ ಚಿತ್ರವಾಗಿದ್ದು, ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿಯವರು ನಾನಾ ಅವತಾರದಲ್ಲಿ ಮಿಂಚಲಿದ್ದಾರೆ. ಭೈರಾದೇವಿ ದುಷ್ಕರನ್ನು ಹೇಗೆ ಶಿಕ್ಷಿಸುತ್ತಾರೆ ಎಂಬುವಂತಹ ಸಾರಾಂಶವನ್ನು ಹೊಂದಿರುವ ಚಿತ್ರ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com