

ಹರಾರೆ: ಕತ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜಿಂಬಾಬ್ವೆಯಲ್ಲಿ ಕಾಮುಕನೋರ್ವನನ್ನು ಬಂಧಿಸಲಾಗಿದೆ.
ಡಿಸೆಂಟ್ ವೀ ಮುಲಿಯೋ(23) ಬಂಧಿತ ವ್ಯಕ್ತಿ. ಆಗಸ್ಟ್ 27 ರಂದು ಗೊಬಜಾಂಗೋ ಎಂಬ ಪ್ರದೇಶದಲ್ಲಿ ಕತ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೊಲೀಸಲು ಆತನನ್ನು ಬಂಧಿಸಿದ್ದಾರೆ.
ಅತ್ಯಾಚಾರಕ್ಕೊಳಪಟ್ಟ ಕತ್ತೆಯ ಕಾಲಿನ ಮಂಡಿಯ ಮೇಲೆ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಲೈಂಗಿಕ ಕಾಯಿದೆಯಡಿ ಆತನನ್ನು ಬಂಧಿಸಿರುವ ಪೊಲೀಸರು ಜಿಂಬಾಬ್ವೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಸೆಪ್ಟಂಬರ್ 15 ಕ್ಕೆ ವಿಚಾರಣೆ ಮುಂದೂಡಲಾಗಿದೆ.