

ಇಸ್ಲಾಮಾಬಾದ್: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಮೆರಿಕಾಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಶರೀಫ್ ಅವರ ನೀತಿ ನಿಯಮ ಹಾಗೂ ನೆರೆಹೊರೆಯ ರಾಷ್ಟ್ರಗಳ ಜೊತೆಗಿನ ಸಂಬಂಧ ಉತ್ತಮಗೊಳಿಸುವ ಹಲವು ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿ ಒಬಾಮಾ ಹೇಳಿದ್ದಾರೆ.
ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳುವಂತೆ ಒಬಾಮಾ ಅಹ್ವಾನ ನೀಡಿರುವುದನ್ನು ಪಾಕ್ ಪ್ರದಾನ ಮಂತ್ರಿಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಇನ್ನು ಅಧಿಕತ ಆಹ್ವಾನದ ಪ್ರತಿ ತಲುಪುವುದು ಬಾಕಿಯಿದೆ.
ಇದೊಂದು ಮಹತ್ವದ ಭೇಟಿಯಾಗಿದ್ದು ಪಾಕ್ ಸರ್ಕಾರದ ಕೆಲವೊಂದು ಶಾಂತಿ ಸಂಬಂಧಿತ ನೀತಿ ಹಾಗೂ ಯೋಜನೆಗಳು ಪ್ರಮುಖವಾಗಿ ಭಾರತದೊಂದಿಗಿನ ಸಂಬಂಧ ಹಾಗೂ ಉಗ್ರರ ಮಟ್ಟ ಹಾಕುವುದರ ಜೊತೆಗೆ ಆರ್ಥಿಕ ಪರಿಸ್ಥಿತಿ ಸದೃಢಗೊಳಿಸುವ ಹಲವು ಯೋಜನೆಗಳಿಗೆ ಬೆಂಬಲ ನೀಡುವುದಾಗಿ ಅಮೆರಿಕಾ ತಿಳಿಸಿದೆ.
ಬರುವ ಸೆಪ್ಟಂಬರ್ ನಲ್ಲಿ ನವಾಜ್ ಶರೀಫ್ ವಿಶ್ವ ಸಂಸ್ಥೆಯ ವಾರ್ಷಿಕ ಸಭೆಗೆ ಹಾಜರಾಗುವ ನಿರೀಕ್ಷೆಯಿತ್ತು.