

ಭಾನುವಾರ ನಡೆದ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ ಜಯ ಗಳಿಸಿದ್ದಾರೆ ಎಂದು ಮ್ಯಾನ್ಮಾರ್ ಒಕ್ಕೂಟದ ಚುನಾವಣಾ ಆಯೋಗ ಘೋಷಿಸಿದೆ.
ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದಿಂದ ಸ್ಪರ್ಧಿಸಿದ್ದ ಆಂಗ್ ಸಾನ್ ಸೂಕಿ ಪುನಾರಾಯ್ಕೆ ಆಗಿದ್ದಾರೆ. ಎನ್ ಎಲ್ ಡಿ ಅಧ್ಯಕ್ಷೆಯಾಗಿರುವ ಆಂಗ್ ಸಾನ್ ಸೂಕಿ ತಮ್ಮ ಪ್ರಮುಖ ವಿರೋಧಿ ಯು.ಕೆ ಯಾವ್ ಜಿನ್ ಹೇನ್ ವಿರುದ್ಧ ಸ್ಪರ್ಧಿಸಿದ್ದರು.
ಆಂಗ್ ಸಾನ್ ಸೂಕಿ ನೇತೃ್ತ್ವದ ಎನ್ ಎಲ್ ಡಿ ಪಕ್ಷ ಜನಪ್ರತಿನಿಧಿಗಳ
ಭವನದಿಂದ 78 ಸೀಟು, ಹೌಸ್ ಆಫ್ ನ್ಯಾಷನಲೈಟ್ಸ್ ನಿಂದ 29, ಪ್ರಾದೇಶಿಕ ಸಂಸತ್ತಿನಿಂದ 182 ಸಿಟುಗಳಲ್ಲಿ ಜಯ ಸಾಧಿಸಿದ್ದು,ಒಟ್ಟು 291 ಸೀಟುಗಳನ್ನು ಪಡೆದುಕೊಂಡಿದೆ.
ಇನ್ನು 3 ಹಂತದಲ್ಲಿ ನಡೆದ ಚುನಾವಣೆಯಲ್ಲಿ 333 ಮಂದಿ ಸಂಸದರು ಆಯ್ಕೆಯಾಗಿದ್ದಾರೆ ಒಕ್ಕೂಟ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ.