

ಮೆಕ್ಸಿಕೋ: ನನ್ನ ಮೇಲೆ ಸುಮಾರು 43,200 ಬಾರಿ ಅತ್ಯಾಚಾರ ನಡೆದಿದೆ ಎಂದು ಮೆಕ್ಸಿಕೋ ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಲುಕಿದ್ದ 23 ವರ್ಷದ ಕಾರ್ಲಾ ಜಾಕಿಂಟೋ ಹೇಳಿದ್ದಾರೆ.
ತಾನು ಮಾನವ ಕಳ್ಳಸಾಗಣೆ ಜಾಲಕ್ಕೆ ಬಲಿಯಾಗಿ ಅನುಭವಿಸಿದ ನರಕಯಾತನೆ ಬಗ್ಗೆ ಖಾಸಗಿ ಚಾನೆಲ್ ವೊಂದಕ್ಕೆ ವಿವರಣೆ ನೀಡಿರುವ ಕಾರ್ಲಾ ಜಾಕಿಂಟೋ 12 ನೇ ವಯಸ್ಸಿನಲ್ಲೇ ತನ್ನನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಯಿತು ಎಂದು ಹೇಳಿದ್ದಾರೆ.
ತನಗೆ ಹಣ, ಕಾರು ಹಾಗೂ ಉಡುಗೊರೆಯ ಆಮೀಷ ತೋರಿ ವ್ಯಕ್ತಿಯೊಬ್ಬ ತನ್ನನ್ನು ವೇಶ್ಯಾವೃತ್ತಿಗೆ ತಳ್ಳಿದ. ಸತತ ನಾಲ್ಕು ವರ್ಷ ಪ್ರತಿದಿನ ಸುಮಾರು 30 ಗಂಡಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಜಾಕಿಂಟೋ ವಿವರಿಸಿದ್ದಾಳೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಮೆಕ್ಸಿಕೋದ ಪ್ರಸಿದ್ಧ ಹೋಟೆಲ್ ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಜಾಕಿಂಟೋಗೆ ಅಲ್ಲಿಂದ ಮುಕ್ತಿ ದೊರೆಯಿತು. 2008 ರಲ್ಲಿ ಆಕೆಗೆ 16 ವರ್ಷ ವಯಸ್ಸಿದ್ದಾಗ ವೇಶ್ಯಾವಾಟಿಕೆಯಿಂದ ನನಗೆ ಮುಕ್ತಿ ದೊರೆಯಿತು ಎಂದು ಜಾಕಿಂಟೋ ತಿಳಿಸಿದ್ದಾಳೆ.