ಭಾರತದ ಮೇಲೆ ವಿಶ್ವಾಸವಿದೆ: ಷರೀಫ್

ಮಾತುಕತೆಗೆ ಸಂಬಂಧಿಸಿ ಪಾಕ್ ಮುಂದಿಟ್ಟಿರುವ ಪ್ರಸ್ತಾಪವನ್ನು ಭಾರತ ಇಂದಲ್ಲ ನಾಳೆ ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವವಿಶ್ವಾಸವಿದೆ ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ...
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ (ಸಂಗ್ರಹ ಚಿತ್ರ)
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ (ಸಂಗ್ರಹ ಚಿತ್ರ)
Updated on: 

ಲಂಡನ್: ಮಾತುಕತೆಗೆ ಸಂಬಂಧಿಸಿ ಪಾಕ್ ಮುಂದಿಟ್ಟಿರುವ ಪ್ರಸ್ತಾಪವನ್ನು ಭಾರತ ಇಂದಲ್ಲ ನಾಳೆ ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವವಿಶ್ವಾಸವಿದೆ ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಷರೀಫ್ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ನಿವಾರಣೆಗೆ 4 ಸೂತ್ರಗಳನ್ನು ಭಾರತದ ಮುಂದಿಟ್ಟಿದ್ದರು. ಸಮುಚಿತ, ಪ್ರಾಯೋಗಿಕವಾದ ಈ ಪ್ರಸ್ತಾಪವನ್ನು ಭಾರತ ಇಂದಲ್ಲ, ನಾಳೆ ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಂಬಿದ್ದಾಗಿ ಎಂದು ಷರೀಫ್ ತಿಳಿಸಿದ್ದಾರೆ. ಇದೇ ವೇಳೆ ಪಾಕ್‍ನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ  ಭಾರತದ ಪಾತ್ರವೂ ಇದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದೂ ಷರೀಫ್ ಇದೇ ವೇಳೆ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com