ಈಜಿಪ್ಟ್ ಬಳಿ ರಷ್ಯಾ ವಿಮಾನ ಪತನ: 5 ಮಕ್ಕಳು ಸೇರಿ 100 ಪ್ರಯಾಣಿಕರ ಶವ ಪತ್ತೆ

ಈಜಿಪ್ಟ್ ನ ಸಿಯಾನ್ ಬಳಿ ರಷ್ಯಾದ- A 321 ಏರ್ ಬಸ್ ಪತನಗೊಂಡಿದ್ದು, ಐವರು ಮಕ್ಕಳು ಸೇರಿ 100 ಪ್ರಯಾಣಿಕರ ಸಾವನ್ನಪ್ಪಿದ್ದಾರೆ.
ಈಜಿಪ್ಟ್ ಬಳಿ ರಷ್ಯಾ ವಿಮಾನ ಪತನ(ಸಾಂಕೇತಿಕ ಚಿತ್ರ)
ಈಜಿಪ್ಟ್ ಬಳಿ ರಷ್ಯಾ ವಿಮಾನ ಪತನ(ಸಾಂಕೇತಿಕ ಚಿತ್ರ)
Updated on: 

ಕೈರೋ: ಈಜಿಪ್ಟ್ ನ ಸಿಯಾನ್ ಬಳಿ ರಷ್ಯಾದ- A 321 ಏರ್ ಬಸ್ ಪತನಗೊಂಡಿದ್ದು, ವಿಮಾನದಲ್ಲಿದ್ದ 224 ಪ್ರಯಾಣಿಕರ ಪೈಕಿ ಐವರು ಮಕ್ಕಳು ಸೇರಿ 100 ಪ್ರಯಾಣಿಕರ ಸಾವನ್ನಪ್ಪಿದ್ದಾರೆ.
ಈಜಿಪ್ಟ್ ನಿಂದ ರಷ್ಯಾಗೆ ತೆರಳಬೇಕಿದ್ದ ವಿಮಾನ ಈಜಿಪ್ಟ್ ನಿಂದ ಟೇಕ್ ಆಫ್ ಅದ ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ಕಂಟ್ರೋಲ್ ನ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ವಿಮಾನ ಈಜಿಪ್ಟ್ ನ ಸಿಯಾನ್ ಬಳಿ ಪತನವಾಗಿರುವುದನ್ನು ಈಜಿಪ್ಟ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪತನಗೊಂಡಿರುವ ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚಾರಣೆ ನಡೆಯುತ್ತಿದ್ದು, ಈ ವರೆಗೂ ರಕ್ಷಣಾ ಸಿಬ್ಬಂದಿ ನಾಲ್ವರನ್ನು ರಕ್ಷಿಸಿದ್ದಾರೆ.
ಪತನಗೊಂಡ ವಿಮಾನದಲ್ಲಿ ಬಹುತೇಕ ರಷ್ಯಾ ಪ್ರವಾಸಿಗರಿದ್ದರು. ಈಜಿಪ್ಟ್ ನ ಶರ್ಮ್ ಎಲ್ ಶೇಕ್ ನ ರೆಡ್ ಸಿ ರೆಸಾರ್ಟ್ ನಿಂದ ರಷ್ಯಾಗೆ ತೆರಳುತ್ತಿದ್ದ ವಿಮಾನ, ಟೇಕ್ ಆಫ್ ಅದ ಕೆಲವೇ ನಿಮಿಷಗಳಲ್ಲಿ ರೆಡಾರ್ ನ ಸಂಪರ್ಕ ಕಳೆದುಕೊಂಡಿತ್ತು ಎಂದು ಏರ್ ಟ್ರಾಫಿಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತನಗೊಳ್ಳುವುದಕ್ಕೂ ಮುನ್ನ ಈಜಿಪ್ಟಿನ ವಾಯುಪ್ರದೇಶವನ್ನು ದಾಟಿತ್ತು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com