ಪಮೇಲಾಳ ನಾಯಿಯ ಸುಸೈಡ್ ಸ್ಟೋರಿ

ಗಂಡ ಸರಿಯಿಲ್ಲ ಅಂತ ಹೆಂಡ್ತಿ ಸುಸೈಡ್ ಮಾಡ್ಕೊಂಡ ಘಟನೆಗಳನ್ನು ಕೇಳಿದ್ದೀರಿ. ಆದರೆ, ಹಾಲಿವುಡ್ ನಟಿ ಪಮೇಲಾ ಆ್ಯಂಡರ್ಸನ್ ಹೇಳೋ ಕತೆ...
ಹಾಲಿವುಡ್ ನಟಿ ಪಮೇಲಾ ಆ್ಯಂಡರ್ಸನ್
ಹಾಲಿವುಡ್ ನಟಿ ಪಮೇಲಾ ಆ್ಯಂಡರ್ಸನ್

ಲಾಸ್ ಏಂಜಲೀಸ್ : ಗಂಡ ಸರಿಯಿಲ್ಲ ಅಂತ ಹೆಂಡ್ತಿ ಸುಸೈಡ್ ಮಾಡ್ಕೊಂಡ ಘಟನೆಗಳನ್ನು ಕೇಳಿದ್ದೀರಿ. ಆದರೆ, ಹಾಲಿವುಡ್ ನಟಿ ಪಮೇಲಾ ಆ್ಯಂಡರ್ಸನ್ ಹೇಳೋ ಕತೆ ಫುಲ್ ಉಲ್ಟಾ! ಪಮೇಲಾಳ ಮಾಜಿ ಗಂಡನ ಕಿರುಕುಳ ತಾಳಲಾರದೆ ಅವಳ ಮನೆ ನಾಯಿ ಆತ್ಮಹತ್ಯೆ ಮಾಡಿಕೊಂಡಿತಂತೆ!

ಪಮೇಲಾ ಈಗಾಗಲೆ ಮೂವರು ಗಂಡಂದಿರಿಗೆ ಡೈವೋರ್ಸ್ ಕೊಟ್ಟಿದ್ದಾಳೆ. ಮೂರನೇ ಗಂಡ ರಿಕ್ ಸಾಲೋಮನ್‍ಗೆ ಎರಡನೇ ಸಲ ಡೈವೋರ್ಸ್ ಕೂಟ್ಟಿದ್ದು ಮೊನ್ನೆ ಏಪ್ರಿಲ್‍ನಲ್ಲಿ. ಈತನೊಂದಿಗೆ ನಾಯಿ ಕೂಡ ಬದುಕಲು ಅಂಜುತ್ತಿತ್ತು ಅಂತಾಳೆ ಪಮೇಲಾ. `ನನ್ನ ಪ್ರೀತಿಯ ನಾಯಿ ಜೋ ಜೋ ಕೆಲ ತಿಂಗಳ ಹಿಂದೆ ಸಾವನ್ನಪ್ಪಿತು. ಇದು ಸಹಜ ಸಾವಲ್ಲ. ಸಾಯುವ ಮೊದಲು ನನ್ನ ಕಡೆ ನೋಡಿ ಆ ನಾಯಿ ಹೇಳಿತ್ತು; ನೀನೇನ್ ಮಾಡ್ತಿಯೋ ಗೊತ್ತಿಲ್ಲ. ಆದ್ರೆ, ನಂಗಂತೂ ಇವನೊಂದಿಗೆ ಬದುಕೋಕ್ಕೆ ಆಗಲ್ಲ. ಸಾಯ್ತಾ ಇದ್ದೀನಿ' ಎಂದು ನಾಯಿ ಸುಸೈಡ್ ಮಾಡ್ಕೊಳ್ತಂತೆ. ಪಮೇಲಾ ಹೇಳಿದ ಕಥೆಯನ್ನು ನಾವು ಬೇರೆ ಥರ ಅರ್ಥೈಸಿಕೊಳ್ಳಬಹುದು: ಮೂವರಿಗೆ ಡೈವೋರ್ಸ್ ಕೊಟ್ಟ ಪಮೇಲಾ ಜತೆ ಮನುಷ್ಯರಿಗೇ ಬದುಕೋದಿಕ್ಕಾಗಲ್ಲ. ಇನ್ನು ನಾಯಿಗೆ ಸಾಧ್ಯವಾ!?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com