

ಲಂಡನ್: ಇಸ್ಲಾಮಿಕ್ ಸ್ಟೇಟ್ ನೇಮಕಾತಿಯಲ್ಲಿ ತೊಡಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಮಾವ ಈಗ ಬ್ರಿಟನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಭೂತ ವಾದಿ ಧರ್ಮಬೋಧಕರಿಗೆ ಜನರ ಮನಸ್ಸು ಕೆಡಿಸಲು ಅವಕಾಶ ನೀಡುತ್ತಿರುವುದರಿಂದಲೇ ಬ್ರಿಟನ್‍ನ ಮುಸ್ಲಿಮರು ಉಗ್ರರಾಗಿ ಬದಲಾಗುತ್ತಿದ್ದಾರೆ. ಇದರ ಹೊಣೆಯನ್ನು ಬ್ರಿಟನ್ಸರ್ಕಾರವೇ ಹೊರಬೇಕು ಎಂದು ಮೊಹಮ್ಮದ್ ತಾರೀಖ್ ಆಗ್ರಹಿಸಿದ್ದಾರೆ.
ಮಕ್ಕಳು ಮೂಲಭೂತವಾದಿ ಧರ್ಮ ಬೋಧಕ ಒಮರ್ ಬಕಾರಿ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಈತ ಇಂಗ್ಲಿಷ್‍ನಲ್ಲಿ ಧರ್ಮ ಬೋಧನೆ ಮಾಡುತ್ತಾನೆ. ಆದರೆ, ಬ್ರಿಟನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮೊಹಮ್ಮದ್ ತಾರೀಖ್ ಪುತ್ರಿ ಆಯಿಷಾ ತನ್ನ ಪತಿ ಸಿದ್ಧಾರ್ಥ ಧರ್ ಹಾಗೂ ಐವರು ಮಕ್ಕಳೊಂದಿಗೆ ಸಿರಿಯಾಗೆ ಪಲಾಯನ ಮಾಡಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಪೂರ್ವ ಲಂಡನ್‍ನಲ್ಲಿ ಅಂಗಡಿ ಇಟ್ಟುಕೊಂಡಿರುವ ತಾರೀಖ್, ಪುತ್ರಿ-ಅಳಿಯನಿಗೆ ಸ್ವದೇಶಕ್ಕೆ ವಾಪಸಾಗುವಂತೆ ಮನವಿ ಮಾಡಿದ್ದಾರೆ. ಸಿದ್ಧಾರ್ಥ ಮೂಲತಃ ಹಿಂದೂವಾಗಿದ್ದು, ನಂತರ ಮತಾಂತರಗೊಂಡಿದ್ದ.
2014 ರಲ್ಲಿ ಶಂಕೆಯ ಮೇರೆಗೆ ಬಂಧಿತನಾಗಿದ್ದ. ಬಿಡುಗಡೆ ಬಳಿಕ ಧರ್ ಪತ್ನಿ ಜತೆಗೆ ಪಲಾಯನ ಮಾಡಿದ್ದ. ವಾರಗಳ ಹಿಂದೆ ಮಗು ಹಾಗೂ ಬಂದೂಕು ಹಿಡಿದು ಆನ್‍ಲೈನ್‍ನಲ್ಲಿ ಫೋಟೋ ಹಾಕಿದಾಗಲೇ ಸಿರಿಯಾಗೆ ಪರಾರಿಯಾಗಿರುವ ವಿಚಾರ ಬಹಿರಂಗವಾದದ್ದು.