ಅಮೆರಿಕಾ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚು ಜಾಗತಿಕ ಕಾರ್ಯಸೂಚಿ ಹೊಂದಿದೆ

ಅಮೆರಿಕ ಜಾಗತಿಕ ಕಾರ್ಯಸೂಚಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಹೇಳಿದ್ದಾರೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್
ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್
Updated on: 

ನ್ಯೂಯಾರ್ಕ್: ಅಮೆರಿಕ ಜಾಗತಿಕ ಕಾರ್ಯಸೂಚಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಸೇರಿ ಮಾಡಬೇಕಾಗಿರುವ ಕೆಲಸಗಳಿಗಿಂತ ನಾವು ಭಾರತದೊಂದಿಗೆ ಮಾಡಬೇಕಾಗಿರುವ ಹಲವಾರು ಸಂಗತಿಗಳಿವೆ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಪ್ರಮುಖ 'ವ್ಯವಹಾರಗಳಿವೆ' ಆದರೆ ಜಾಗತಿಕ ಕಾರ್ಯಸೂಚಿಗಳ ವಿಷಯದಲ್ಲಿ ಅಮೆರಿಕ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಆಶ್ ಕಾರ್ಟರ್ ತಿಳಿಸಿದ್ದಾರೆ.
ವಿದೇಶಾಂಗ ಸಂಬಂಧಗಳ ಪರಿಷತ್ ನಲ್ಲಿ  ಭಾರತದೊಂದಿಗೆ ಅಮೆರಿಕ ದ್ವಿಪಕ್ಷೀಯ ಸಂಬಂಧ ಹೆಚ್ಚುತ್ತಿದ್ದು ಇದು ಇಸ್ಲಾಮಾಬಾದ್ ನೊಂದಿಗಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆಯಲ್ಲಿ ಆಶ್ ಕಾರ್ಟರ್ ಈ ವಿಷಯ ತಿಳಿಸಿದ್ದಾರೆ. 
ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತ ಭೆಟಿಯ ಮುನ್ನಾದಿನ ಅಮೇರಿಕಾದ  ವಿದೇಶಾಂಗ ಸಂಬಂಧಗಳ ಪರಿಷತ್ ನಲ್ಲಿ ಮಾತನಾಡಿದ್ದಾರೆ. ಪಾಕಿಸ್ತಾನದ ಮತ್ತೊಂದು ಮುಖವಾಗಿ ಭಾರತದೊಂದಿಗೆ, ಭಾರತದ ಮತ್ತೊಂದು ಮುಖವಾಗಿ ಪಾಕಿಸ್ತಾನದೊಂದಿಗೆ ವ್ಯವಹರಿಸುವ ದಿನಗಳು ಹೋಗಿವೆ. ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ ಎಂದಿದ್ದಾರೆ ಆಶ್ ಕಾರ್ಟರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com