

ಕಾಠ್ಮಂಡು: ಫಿಶ್ ತೈಲ್ ಏರ್ ಹೆಲಿಕಾಪ್ಟರ್ ನೇಪಾಳದ ಕಾಠ್ಮಂಡು ಬಳಿ ಪತನಗೊಂಡಿದ್ದು ಮಗು ಸೇರಿ 7 ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದಾರೆ.
5 ದಿನದ ಮಗುವಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಹೆಲಿಕಾಪ್ಟರ್ ನಲ್ಲಿ ಕರೆದೊಯ್ಯುತ್ತಿದ್ದಾಗ ಸುಮಾರು ಮಧ್ಯಾಹ್ನ 1 ಗಂಟೆಗೆ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಲಿಕಾಪ್ಟರ್ ಪತನ ಹೊಂದಿರುವುದಾಗಿ ಹೆಲಿಕಾಪ್ಟರ್ ಮಾಲೀಕತ್ವ ಸಂಸ್ಥೆ ಸಹ ದೃಢಪಡಿಸಿದೆ.
ಹೆಲಿಕಾಪ್ಟರ್ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಪರ್ಕ ಕಡಿತಗೊಂಡಿತ್ತು ಎಂದು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ದೇವೇಂದ್ರ ಅವರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನದ ನಂತರ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಅಲ್ಲಿನ ಗ್ರಾಮಸ್ಥರು ನೀಡಿದ ಸೂಚನೆ ಮೇರೆಗೆ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳಿದಾಗ 7 ಮೃತದೇಹಗಳು ಪತ್ತೆಯಾಗಿವೆ.