ಥಾಯ್ಲಾಂಡ್‌ನಲ್ಲಿ ಸರಣಿ ಸ್ಫೋಟ: 4 ಸಾವು

ಥಾಯ್ಲೆಂಡ್ ನ ಹುವಾಹಿನ್ ಪ್ರವಾಸಿ ತಾಣದಲ್ಲಿ ಗುರುವಾರ ತಡರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು ಸ್ಫೋಟದಲ್ಲಿ ನಾಲ್ವರು...
ಸರಣಿ ಸ್ಫೋಟ
ಸರಣಿ ಸ್ಫೋಟ
ಹುವಾಹಿನ್: ಥಾಯ್ಲೆಂಡ್ ನ ಹುವಾಹಿನ್ ಪ್ರವಾಸಿ ತಾಣದಲ್ಲಿ ಗುರುವಾರ ತಡರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 
ಸರಣಿ ಬಾಂಬ್ ಸ್ಫೋಟದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಇನ್ನು 9 ಮಂದಿ ವಿದೇಶಿ ಪ್ರವಾಸಿಗರು ಸೇರಿದಂತೆ 20 ಮಂದಿಗೆ ಗಾಯಗಳಾಗಿವೆ. ಸರಣಿ ಬಾಂಬ್ ಸ್ಫೋಟ ಸಂಬಂಧ ತನಿಖಾಧಿಕಾರಿಗಳು ತನಿಖಾ ಜಾಡು ಹಿಡಿದಿದ್ದಾರೆ. 
ಸರಣಿ ಬಾಂಬ್ ಸ್ಫೋಟ ಕುರಿತಂತೆ ಪ್ರಧಾನಿ ಪ್ರಯೂತ್ ಚಾನ ಓ ಚಾನ್ ಅವರು ಜನರಿಗೆ ಗಾಬರಿಯಾಗದಂತೆ ಮನವಿ ಮಾಡಿದ್ದಾರೆ. ಇನ್ನು ಸ್ಫೋಟಗಳ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದರು. 
ಜರ್ಮನ್, ಇಟಾಲಿಯನ್, ಡಚ್ ಮತ್ತು ಆಸ್ಟ್ರಿಯಾ ಪ್ರಜೆಗಳು ಬಾಂಬ್ ಸ್ಫೋಟದ ಗಾಯಾಳುಗಳಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com