ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ನಟಿ ರಮ್ಯಾ ಹೇಳಿಕೆ

ಕಾಂಗ್ರೆಸ್‌ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪಾಕಿಸ್ತಾನ ಪರ ವಿವಾದಾತ್ಮಕ ಹೇಳಿಕೆ ಸಂಬಂಧ ಪಾಕಿಸ್ತಾನ ಪತ್ರಿಕೆಗಳು ಸುದ್ದಿ ಮಾಡಿವೆ...
ರಮ್ಯಾ
ರಮ್ಯಾ

ನವದೆಹಲಿ: ಕಾಂಗ್ರೆಸ್‌ನ ಮಾಜಿ ಸಂಸದೆ  ಹಾಗೂ ನಟಿ ರಮ್ಯಾ ಪಾಕಿಸ್ತಾನ ಪರ ವಿವಾದಾತ್ಮಕ ಹೇಳಿಕೆ ಸಂಬಂಧ ಪಾಕಿಸ್ತಾನ ಪತ್ರಿಕೆಗಳು ಸುದ್ದಿ ಮಾಡಿವೆ.

ಪಾಕಿಸ್ತಾನ ನರಕವೇನೂ ಅಲ್ಲ. ಅಲ್ಲಿರುವವರು ನಮ್ಮಂತೆಯೇ ಎಂದು ರಮ್ಯಾ ಹೇಳಿಕೆ ನೀಡಿದ್ದರು. ಪಾಕಿಸ್ತಾನ ಹೊಗಳಿದ್ದಕ್ಕೆ ಭಾರತದ ನಟಿ ವಿರುದ್ಧ ದೇಶದ್ರೋಹ ಪ್ರಕರಣ ಎಂಬ ಹೆಡ್ ಲೈನ್ ನೀಡಿ  'ದ ಡಾನ್’ ಪತ್ರಿಕೆ ಸುದ್ದಿಯನ್ನು ಪ್ರಕಟಿಸಿದೆ.

ಪಾಕಿಸ್ತಾನ ಕುರಿತ ತಮ್ಮ ಹೇಳಿಕೆ  ಬಗ್ಗೆ ಕ್ಷಮೆ ಕೇಳುವುದಿಲ್ಲ ಹಾಗೂ ದೇಶದ್ರೋಹ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ  ಎಂದಿರುವ ರಮ್ಯಾ ಅವರ ಹೇಳಿಕೆಯನ್ನೂ ಪತ್ರಿಕೆ ಉಲ್ಲೇಖಿಸಿದೆ. ಇದೇ ವೇಳೆ ಪಾಕಿಸ್ತಾನದ ಇನ್ನೊಂದು  ಪ್ರಮುಖ ಪತ್ರಿಕೆ ‘ದಿ ನೇಷನ್’ ಕೂಡಾ ‘ಪಾಕಿಸ್ತಾನವನ್ನು ಮೆಚ್ಚಿದ್ದಕ್ಕೆ ಭಾರತೀಯ ನಟಿ ವಿರುದ್ಧ  ದೇಶದ್ರೋಹ ಪ್ರಕರಣ’ ಹೆಡ್ ಲೈನ್ ನೊಂದಿಗೆ ಸುದ್ದಿ ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com