ಇಮ್ರಾನ್‌ ಖಾನ್'ರ ಸುಳ್ಳು ಮದುವೆ ಸುದ್ದಿ ಪ್ರಸಾರ: 13 ಪಾಕ್ ಟಿವಿ ಚಾನಲ್‌ಗಳಿಗೆ ದಂಡ

ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಮದುವೆಯಾಗಿದ್ದಾರೆಂದು ಹೇಳಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ...
ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್
ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್

ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಮದುವೆಯಾಗಿದ್ದಾರೆಂದು ಹೇಳಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಪಾಕಿಸ್ತಾನದ 13 ಟಿವಿ ಚಾನೆಲ್ ಗಳ ದಂಡ ಹೇರಲಾಗಿದೆ.

ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮೂರನೇ ಮದುವೆಯಾಗಿದ್ದಾರೆಂದು ಹೇಳಿ ಪಾಕಿಸ್ತಾನದ ಕೆಲ ಟಿವಿ ಚಾನೆಲ್ ಗಳು ಸುದ್ದಿ ಪ್ರಸಾರ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಹೇಳಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್ ಎ)ದಲ್ಲಿ ದೂರು ದಾಖಲಿಸಿದ್ದರು.

ಕೆಲ ಸಮಯದ ನಂತರ ಇಮ್ರಾನ್ ಖಾನ್ ಅವರು ತಮ್ಮ ದೂರನ್ನು ಹಿಂಪಡೆದಿದ್ದರು. ಆದರೂ, ಮಾಧ್ಯಮಗಳ ಈ ವರ್ತನೆಗೆ ವಿರೋಧ ವ್ಯಕ್ತಪಡಿಸಿರುವ ಪಿಇಎಂಆರ್'ಎ ಸುದ್ದಿ ಪ್ರಸಾರ ಮಾಡಿದ 13 ವಾಹಿನಿಗಳಿಗೆ ರು.5 ಲಕ್ಷ ದಂಡವನ್ನು ವಿಧಿಸಿದೆ.

ಚಾನೆಲೆಗಳು ನಿಯಮವನ್ನು ಉಲ್ಲಂಘಿಸಿರುವುದರ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಲಾಗಿದೆ ಎಂದು ಪಿಇಎಂಆರ್'ಎ ಹೇಳಿದೆ.

63 ವರ್ಷದ ಇಮ್ರಾನ್ ಖಾನ್ ಅವರು ಮೂರನೇ ಮದುವೆಯಾಗಿದ್ದು, ಲಂಡನ್ ನಲ್ಲಿ ವಿವಾಹವಾಗಿದ್ದಾರೆಂದು ವಾಹಿನಿಗಳು ಜುಲೈ 12 ರಂದು ಸುದ್ದಿ ಪ್ರಸಾರ ಮಾಡಿವೆ. ಇದಲ್ಲದೆ, ಈ ಸುದ್ದಿಯನ್ನು ಪದೇಪದೇ ಪ್ರಸಾರ ಮಾಡಿದ್ದವು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಇಮ್ರಾನ್ ಖಾನ್ ಅವರು ಇದೊಂದು ತಪ್ಪು ಮಾಹಿತಿ ಎಂದು ಹೇಳಿ ಪಿಇಎಂಆರ್'ಎ ಬಳಿ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com