ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್'ಗೆ ಇಸಿಸ್ ಬೆಂಬಲ

ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಇಸಿಸ್ ಬೆಂಬಲ ಸೂಚಿಸಿದ್ದು, ಟ್ರಂಪ್ ಗೆಲ್ಲಬೇಕೆಂದು...
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಇಸಿಸ್ ಬೆಂಬಲ ಸೂಚಿಸಿದ್ದು, ಟ್ರಂಪ್ ಗೆಲ್ಲಬೇಕೆಂದು ಹೇಳಿಕೊಂಡಿದೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ವರದಿಯಲ್ಲಿ, ಟ್ರಂಪ್ ಅವರಿಗೆ ಇಸಿಸ್ ಉಗ್ರ ಸಂಘಟನೆಯ ಮುಖಂಡರು ಬೆಂಬಲ ಸೂಚಿಸಿದ್ದು, ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಸ್ವಯಂ ನಾಶವಾಗಲಿದೆ. ಹೀಗಾಗಿ ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಬೇಕೆಂದು ಹೇಳಿದ್ದಾರೆಂದು ಎಂದು ವರದಿ ಮಾಡಿದೆ.

ಕೆಲ ತಿಂಗಳ ಹಿಂದೆ ಇಸಿಸ್ ಉಗ್ರ ಸಂಘಟನೆಯ ವಕ್ತಾರ ನಶೀರ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದ. ಈ ವೇಳೆ ಅಮೆರಿಕದಲ್ಲಿ ಟ್ರಂಪ್ ಗೆಲ್ಲವು ಸಾಧಿಸಲೆಂದು ದೇವರಲ್ಲಿ ಕೋರುತ್ತೇನೆಂದು ಹೇಳಿದ್ದ.

ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಹಲವು ಪ್ರಚಾರದಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರು, ಇಸ್ಲಾಮಿಕ್ ಸ್ಟೇಟ್ ವಿರುದ್ಧ ಕಿಡಿಕಾರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದೇ ಆದರೆ, ಮೊದಲು ಇಸಿಸ್ ಸಂಘಟನೆಯನ್ನು ತೊಲಗಿಸುತ್ತೇನೆಂದು ಹೇಳಿದ್ದರು. ಟ್ರಂಪ್ ಅವರು ಇಸಿಸ್ ವಿರುದ್ಧ ಈ ಮಟ್ಟದಲ್ಲಿ ಕೆಂಡಕಾರಿದ್ದರೂ ಇಸಿಸ್ ಮಾತ್ರ ಟ್ರಂಪ್ ಅವರಿಗೇ ಬೆಂಬಲ ಸೂಚಿಸಿದೆ.

ಟ್ರಂಪ್ ಅವರಿಂದಲೇ ಇಸಿಸ್ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ಟ್ರಂಪ್ ಶ್ವೇತಭವನವನ್ನು ಪ್ರವೇಶಿಸಲೇಬೇಕು. ಸ್ಥಿರ ನಾಯಕತ್ವ ನೀಡುವಲ್ಲಿ ಟ್ರಂಪ್ ಅವರು ವಿಫಲರಾಗುತ್ತದೆ. ಇದರಿಂದ ಅಮೆರಿಕ ರಾಷ್ಟ್ರ ದುರ್ಬಲಗೊಳ್ಳುತ್ತದೆ. ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಸ್ವಯಂ ನಾಶವಾಗಲಿದೆ ಎಂದು ಇಸಿಸ್ ಮುಖಂಡರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com