ಸಿರಿಯಾ ದಾಳಿಯಲ್ಲಿ ಐ ಎಸ್ ವಕ್ತಾರ ಆಲ್-ಅದ್ನಾನಿಯನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಘೋಷಣೆ
ಸಿರಿಯಾದಲ್ಲಿ ರಷ್ಯಾ ನಡೆಸಿರುವ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ವಕ್ತಾರ ಮತ್ತು ಮುಖ್ಯ ತಂತ್ರಕಾರನನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಭದ್ರತಾ ಸಚಿವಾಲ ಹೇಳಿಕೊಂಡಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ವಕ್ತಾರ ಆಲ್-ಅದ್ನಾನಿ
ಬೀರಟ್: ಸಿರಿಯಾದಲ್ಲಿ ರಷ್ಯಾ ನಡೆಸಿರುವ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ವಕ್ತಾರ ಮತ್ತು ಮುಖ್ಯ ತಂತ್ರಕಾರನನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಭದ್ರತಾ ಸಚಿವಾಲ ಹೇಳಿಕೊಂಡಿದೆ.
ಅಲ್ಲೆಪ್ಪೋ ಪ್ರಾಂತ್ಯದಲ್ಲಿ ರಷ್ಯಾ ನಡೆಸಿದ ವಾಯುದಾಳಿಯಲ್ಲಿ 40 ಐ ಎಸ್ ಉಗ್ರಗಾಮಿಗಳು ಮತ್ತು ವಕ್ತಾರ ಅಬು ಮೊಹಮದ್ ಆಲ್-ಅದ್ನಾನಿಯನ್ನು ಹತ್ಯೆ ಮಾಡಿರುವುದಾಗಿ ತಮ್ಮ ಬೇಹುಗಾರಿಕೆ ಧೃಢಪಡಿಸಿದೆ ಎಂದು ಬುಧವಾರ ರಷ್ಯಾ ಭದ್ರತಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸಿರಿಯಾ ಮತ್ತು ಇರಾಕ್ ನಲ್ಲಿ ಹಿಮ್ಮೆಟ್ಟಿರುವ ಉಗ್ರಗಾಮಿ ಸಂಘಟನೆಗೆ ಈ ವಕ್ತಾರನ ಸಾವು ದೊಡ್ಡ ನಷ್ಟ ಎನ್ನಲಾಗಿದೆ.
ಅಲ್ಲೆಪ್ಪೋ ಈಶ್ಯಾನ್ಯದಲ್ಲಿ ಸಿರಿಯನ್ ನಗರ ಆಲ್-ಬಾಬ್ ನನ್ನು ಗುರಿಯಾಗಿಸಿಕೊಂಡು ಆಲ್-ಅದ್ನಾನಿ ಮೇಲೆ ವಾಯುದಾಳಿ ನಡೆಸಿರುವುದಾಗಿ ಅಮೆರಿಕಾ ಹೇಳಿತ್ತು. "ಈ ದಾಳಿಯ ಫಲಿತಾಂಶಕ್ಕಾಗಿ ನಾವಿನ್ನು ಕಾಯುತ್ತಿದ್ದೇವೆ" ಎಂದು ಅಮೆರಿಕಾದ ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಪೀಟರ್ ಕುಕ್ ಮಂಗಳವಾರ ಹೇಳಿದ್ದರು.
ಪಶ್ಚಿಮ ದೇಶಗಳ ಮೇಲೆ ದಾಳಿ ಮಾಡುವಂತೆ ಆಲ್-ಅದ್ನಾನಿ ಪದೇ ಪದೇ ಕರೆ ನೀಡುತ್ತಿದ್ದ.