ವಾಷಿಂಗ್ ಟನ್: ಸೌದಿ ಅರೇಬಿಯಾಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲು ಅಮೆರಿಕ ನಿರ್ಧರಿಸಿದೆ. ಯೆಮೆನ್ ನಲ್ಲಿ ಇರಾನ್ ಬೆಂಬಲಿತ ಹುತಿ ಬಂಡುಕೋರರ ವಿರುದ್ಧ ಯುದ್ಧ ಸಾರಿರುವ ಸೌದಿ ಅರೇಬಿಯಾದ ರಾಜಪ್ರಭುತ್ವದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಲು ಅಮೆರಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡದಿರಲು ನಿರ್ಧರಿಸಿದೆ.
ಅಮೆರಿಕಾದ ಭದ್ರತಾ ಸಹಕಾರ ಸಹಿ ಮಾಡಲಾಗಿರುವ ಖಾಲಿ ಚೆಕ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ ಎಂದು ಅಮೆರಿಕದ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೌದಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರ ಹುತಿ ಬಂಡಾಯಕಾರರಿಗೆ ಹಿಂಸೆ ನೀಡುತ್ತಿರುವುದರ ಬಗೆಗಿನ ನಮ್ಮ ಕಾಳಜಿಯನ್ನು ತೋರುತ್ತದೆ ಎಂದು ಅಮೆರಿಕ ತಿಳಿಸಿದೆ.
ನಿಖರವಾದ-ಮಾರ್ಗದರ್ಶನದ ಯುದ್ಧಸಾಮಗ್ರಿಗಳನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿತ್ತು, ಈಗಾಗಲೇ ಸೌದಿ ಅರೇಬಿಯಾ ಹಾಗೂ ಅಮೆರಿಕಾದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು, ಈಗ ಅಮೆರಿಕ ಸೌದಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡದಿರುವ ನಿರ್ಧಾರದಿಂದ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
ಮೆರಿಕದ ಅವಳಿ ಕಟ್ಟಡಗಳ ಮೇಲೆ 2001, ಸೆಪ್ಟೆಂಬರ್ 11ರಂದು ನಡೆದ ಉಗ್ರಗಾಮಿ ದಾಳಿಗೆ ಸೌದಿ ಅರೇಬಿಯಾ ಕಾರಣ ಎಂದು ಅಮೆರಿಕ ಕಾಂಗ್ರೆಸ್ ಮಸೂದೆ ಅನುಮೋದಿಸಿದಾಗಿನಿಂದ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧದ ಬಿಕ್ಕಟ್ಟು ಉಂಟಾಗಿದೆ.