ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯವನ್ನು ಸ್ವಾಗತಿಸಿದ ಅರಬ್ ಲೀಗ್

ಪ್ಯಾಲೆಸ್ಟೇನ್ ಆಕ್ರಮಿತ ಪ್ರದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿರುವ ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯವನ್ನು ಅರಬ್ ಲೀಗ್ ಸ್ವಾಗತಿಸಿದೆ.
ಅರಬ್ ಲೀಗ್
ಅರಬ್ ಲೀಗ್
Updated on: 
ಕೈರೋ: ಪ್ಯಾಲೆಸ್ಟೇನ್ ಆಕ್ರಮಿತ ಪ್ರದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿರುವ ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯವನ್ನು ಅರಬ್ ಲೀಗ್ ಸ್ವಾಗತಿಸಿದೆ. 
ಆಕ್ರಮಿತ ಪ್ರದೇಶದಲ್ಲಿ ನೆಲೆ ನಿರ್ಮಾಣದ ಕಾರ್ಯವನ್ನು ತಕ್ಷಣವೇ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ನಿರ್ಣಯದಲ್ಲಿ ಇಸ್ರೇಲ್ ಗೆ ಸೂಚನೆ ನೀಡಲಾಗಿದೆ. ಇಸ್ರೇಲ್ ವಿರುದ್ಧದ ನಿರ್ಣಯದ ಬಗ್ಗೆ ಪ್ರತ್ರಿಯೆ ನೀಡಿರುವ ಅರಬ್ ಲೀಗ್ ಜನರಲ್ ಅಹ್ಮದ್ ಅಬೋಲ್-ಗೆಯಿಟ್ ಪ್ಯಾಲೆಸ್ಟೇನ್ ನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, 35 ವರ್ಷದ ನಂತರ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 
ವಿಶ್ವಸಂಸ್ಥೆಯ ನಿರ್ಣಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪ್ಯಾಲೆಸ್ಟೇನ್ ನ ಜನತೆಗೆ ನ್ಯಾಯಸಮ್ಮತ ಹಕ್ಕು ದೊರೆತಿದೆ ಎಂದು ಅರಬ್ ಲೀಗ್ ಹೇಳಿದೆ. ಡಿ.23 ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇಸ್ರೇಲ್ ವಿರುದ್ಧ  ಮಂಡಿಸಲಾದ ನಿರ್ಣಯಕ್ಕೆ 15 ಸದಸ್ಯ ರಾಷ್ಟ್ರಗಳು ಬೆಂಬಲಿಸಿದ್ದು, ಅಮೆರಿಕ ಸಹ ಇಸ್ರೇಲ್ ವಿರುದ್ಧದ ನಿರ್ಣಯವನ್ನು ಬೆಂಬಲಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com