ಪರ್ಲ್ ಹಾರ್ಬರ್ ಭೇಟಿ ವೇಳೆ ಕ್ಷಮೆ ಕೇಳದ ಜಪಾನ್ ಪ್ರಧಾನಿ ಶಿಂಜೋ ಅಬೆ

ಜಪಾನ್ ಪ್ರಧಾನಿ ಶಿಂಜೋ ಅಬೆ ಡಿ.27 ರಂದು ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದು, ಎರಡನೇ ವಿಶ್ವಯುದ್ಧದ ವೇಳೆ ಜಪಾನ್ ಅಮೆರಿಕದ ಮೇಲೆ ದಾಳಿ ನಡೆಸಿ ಯೋಧರನ್ನು ಹತ್ಯೆ ಮಾಡಿದ್ದ ಘಟನೆಗೆ ಕ್ಷಮೆ ಕೇಳಿಲ್ಲ.
ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ
ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ
Updated on: 
ವಾಷಿಂಗ್ ಟನ್: ಜಪಾನ್ ಪ್ರಧಾನಿ ಶಿಂಜೋ ಅಬೆ ಡಿ.27 ರಂದು ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದು, ಎರಡನೇ ವಿಶ್ವಯುದ್ಧದ ವೇಳೆ ಜಪಾನ್ ಅಮೆರಿಕದ ಮೇಲೆ ದಾಳಿ ನಡೆಸಿ ಯೋಧರನ್ನು ಹತ್ಯೆ ಮಾಡಿದ್ದ ಘಟನೆಗೆ ಕ್ಷಮೆ ಕೇಳಿಲ್ಲ.
ಅಮೆರಿಕದೊಂದಿಗಿನ ಸಂಬಂಧದ ಮರುಬೆಸುಗೆಗಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದರು ಎಂದು ಅಬೆ ಅವರ ಸರ್ಕಾರ ಸ್ಪಷ್ಟನೆ ನೀಡಿದ್ದು, ಭೇಟಿ ನಿಗದಿಯಾದಾಗಲೇ ತಾವು ಪರ್ಲ್ ಹಾರ್ಬರ್ ಘಟನೆಗೆ ಕ್ಷಮೆ ಕೋರುವುದಿಲ್ಲ ಎಂದು ಶಿಂಜೋ ಅಬೆ ಸ್ಪಷ್ಟಪಡಿಸಿದ್ದರು. 
ಪರ್ಲ್ ಹಾರ್ಬರ್ ಸ್ಮಾರಕದ ಬಳಿ ನಿಂತಾಗ ಅಕ್ಷರಸಹ ಮೂಕನಾಗಿದ್ದಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ತಿಳಿಸಿದ್ದು, ಅಮೆರಿಕ-ಜಪಾನ್ ಎರಡನೇ ಯುದ್ಧದ ವೇಳೆ ನಡೆಸಿದ ತೀವ್ರವಾದ ಯುದ್ಧ ಮಾನವ ಇತಿಹಾಸದ ಕಥಾನಕದಲ್ಲಿ ಎಂದಿಗೂ ಉಳಿಯಲಿದೆ ಎಂದು ಹೇಳಿದ್ದಾರೆ. 
ಎರಡನೇ ವಿಶ್ವ ಯುದ್ಧದ ವೇಳೆ 1941 ರ ಡಿ.7 ರಂದು ಜಪಾನ್ ಪರ್ಲ್ ಹಾರ್ಬರ್ ಮೇಲೆ ನಡೆಸಿದ್ದ ದಾಳಿಯಲ್ಲಿ 2,403 ಅಮೆರಿಕನ್ನರನ್ನು ಹತ್ಯೆ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com