ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ: 8 ಸಾವು, 40 ಮಂದಿಗೆ ಗಾಯ

ಪಾಕಿಸ್ತಾನದ ಪಶ್ಚಿಮ ನಗರ ಕ್ವೆಟ್ಟಾದಲ್ಲಿ ಶನಿವಾರ ಆತ್ಮಾಹುತಿ ಬಾಂಬ್ ದಾಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕ್ವೆಟ್ಟಾ: ಪಾಕಿಸ್ತಾನದ ಪಶ್ಚಿಮ ನಗರ ಕ್ವೆಟ್ಟಾದಲ್ಲಿ ಶನಿವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಅರೆ ಸೇನಾಪಡೆ ಸಾಗುತ್ತಿದ್ದ ವೇಳೆ ನಗರದ ಜಿಲ್ಲಾ ಕೋರ್ಟ್ ಬಳಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದೆ ಎಂದು ಆ ಪ್ರಾಂತ್ಯದ ಗೃಹ ಕಾರ್ಯದರ್ಶಿ ಅಕ್ಬರ್ ದುರಾಣಿ ಅವರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟವರು ಸೇನಾ ಸಿಬ್ಬಂದಿಯೋ ಅಥವಾ ನಾಗರಿಕರೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com