ಇಸ್ತಾಂಬುಲ್: ದೋಣಿ ಮುಳುಗಿ 11 ಮಕ್ಕಳು ಸೇರಿದಂತೆ ಒಟ್ಟು 27 ವಲಸಿಗರು ನೀರುಪಾಲಾಗಿರುವ ಘಟನೆ ಸೋಮವಾರ ನಡೆದಿದೆ.
ಟರ್ಕಿಯಿಂದ ಗ್ರೀಸ್ ಗೆ ವಲಸೆ ಹೋಗುತ್ತಿದ್ದವರ ದೋಣಿಗಳು ಮುಳುಗಿದ ಪರಿಣಾಮ 11 ಮಕ್ಕಳು ಸೇರಿದಂತೆ 27 ಮಂದಿ ವಲಸಿಗರು ನೀರುಪಾಲಾಗಿದ್ದಾರೆ. ಘಟನೆಯಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಇಬ್ಬರನ್ನು ಮೀನುಗಾರರು ರಕ್ಷಿಸಿದ್ದು, ಮತ್ತಿಬ್ಬರನ್ನು ಟರ್ಕಿ ಕಾವಲು ಪಡೆ ರಕ್ಷಿಸಿದೆ.
ನೀರುಪಾಲದವರ ಮೃತದೇಹಗಳಿಗಾಗಿ ಟರ್ಕಿ ಕರಾವಳಿ ಕಾವಲು ಪಡೆ ಶೋಧ ಕಾರ್ಯ ನಡೆಸುತ್ತಿದೆ. 2016ರಲ್ಲಿ ಸುಮಾರು ವಲಸೆ ಹೋಗುತ್ತಿದ್ದ 400ಕ್ಕೂ ಹೆಚ್ಚು ಮಂದಿ ನೀರು ಪಾಲಾಗಿದ್ದಾರೆ.
ಇನ್ನೂ, ಇಝ್ ಮಿರ್ ಪ್ರಾಂತ್ಯದ ದಿಕಿಲಿ ಕರಾವಳಿಯಲ್ಲಿ ಮತ್ತೊಂದು ದೋಣಿ ಮುಳುಗಿದ್ದು, 11 ವಲಸಿಗರು ನೀರುಪಾಲಾಗಿದ್ದು, ಮೂವರನ್ನು ರಕ್ಷಿಸಲಾಗಿದೆ.
ಸಿರಿಯಾ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಸಂಭವಿಸುತ್ತಿರುವ ನಿರಂತರ ಹಿಂಸಾಚಾರದಿಂದ ಬೇಸತ್ತು ಟರ್ಕಿಯಿಂದ ಗ್ರೀಸ್‌ಗೆ ಸುಮಾರು 900,000 ಮಂದಿ ವಲಸೆ ಹೋಗುತ್ತಿದ್ದಾರೆ. ಆದರೆ, ವಲಸಿಗರು ಹೆಚ್ಚಾಗಿ ದೋಣಿ ದುರಂತದಲ್ಲಿ ಸಾವನ್ನಪ್ಪುತ್ತಿದ್ದಾರೆ.