ಅಮೆರಿಕ: ಕಾರು ಅಪಘಾತದಲ್ಲಿ ಹೈದ್ರಾಬಾದ್ ವಿದ್ಯಾರ್ಥಿ ಸಾವು

ಅಮೆರಿಕದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈದ್ರಾಬಾದ್ ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ...
ಅಮೆರಿಕಾದಲ್ಲಿ ಮೃತಪಟ್ಟ ಹೈದ್ರಾಬಾದ್ ಮೂಲದ ಜಾಯ್ ಮ್ಯಾಥ್ಯೂ ಮೋಸಸ್
ಅಮೆರಿಕಾದಲ್ಲಿ ಮೃತಪಟ್ಟ ಹೈದ್ರಾಬಾದ್ ಮೂಲದ ಜಾಯ್ ಮ್ಯಾಥ್ಯೂ ಮೋಸಸ್
Updated on: 
ಹೈದ್ರಾಬಾದ್: ಅಮೆರಿಕದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈದ್ರಾಬಾದ್ ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. 
ಅಮೆರಿಕದ ಟ್ರಾಯ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಹೈದ್ರಾಬಾದ್ ಮೂಲದ ವಿದ್ಯಾರ್ಥಿ ಮೂಲದ ಜಾಯ್ ಮ್ಯಾಥ್ಯೂ ಮೋಸಸ್(24) ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆ. 
ಅಮೆರಿಕಾದ ಅಲಬಮಾ ಬಳಿ ಮ್ಯಾಥ್ಯೂ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮ್ಯಾಥ್ಯೂ ಮತ್ತು ಮತ್ತೊಂದು ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ವೀಕೆಂಡ್ ಪಾರ್ಟಿ ಮುಗಿಸಿ ಬೆಳಗ್ಗಿನ ಜಾವ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಟಾರನಕಾ ನಗರದಲ್ಲಿ ಮ್ಯಾಥ್ಯೂ ವಾಸವಾಗಿದ್ದು, ಆತನ ಕುಟುಂಬ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯವರು. ಪ್ರಸ್ತುತ ಮ್ಯಾಥ್ಯೂ ಕುಟಂಬ ಹೈದ್ರಾಬಾದ್ ನಲ್ಲಿ ನೆಲೆಸಿದೆ. 
ಅಮೆರಿಕದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮ್ಯಾಥ್ಯೂ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com