

ಇಸ್ಲಾಮಾಬಾದ್: ಕ್ವೆಟ್ಟಾ ನಗರದಲ್ಲಿ ಅರೆಸೇನಾ ಪಡೆ ಪ್ರಾಂಟಿಯರ್ ಕಾರ್ಪ್ಸ್ (ಎಫ್ಸಿ) ವಾಹನದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ.
ಪಾಕಿಸ್ತಾನದ ನೈಋತ್ಯ ಭಾಗದಲ್ಲಿ ಇಂದು ಮಧ್ನಾಹ್ನ 12.45 ರ ಸುಮಾರಿಗೆ ಬಾಂಬ್ ಸ್ಫೋಟ ಸಂಭವಿಸಿದ್ದು. ಐವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಎಫ್ಸಿ ದೈನಂದಿನ ಪಹರೆಯಲ್ಲಿ ಮಗ್ನವಾಗಿದ್ದಾಗ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ ಪ್ರ್ಯಾಂತದಲ್ಲಿನ ಕ್ವೆಟ್ಟಾದ ಮಾರ್ಗೇಟ್ ಪ್ರದೇಶದಲ್ಲಿ ಬಾಂಬ್ ಸ್ಪೋಟಿಸಿತು ಎಂದು ವರದಿಗಳು ಹೇಳಿವೆ. ಸ್ಫೋಟ ಸಂಭವಿಸಿದ ಬೆನ್ನಲ್ಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.