

ಇರಾನ್: ವಿದ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಜಗತ್ತಿನಾದ್ಯಂತ ಮಾರಣ ಹೋಮ ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಇಸಿಸ್) ವಿರುದ್ಧ ಇರಾನ್ ನ ಈ ಅಜಾನುಬಾಹು ಯುವಕ ತೊಡೆ ತಟ್ಟಿ ನಿಂತಿದ್ದಾನೆ.
ಇಸಿಸ್ ರಕ್ತ ಪಿಪಾಸುಗಳನ್ನು ಮಟ್ಟ ಹಾಕೋದು ಹೇಗೆ ಅಂತಾ ವಿಶ್ವದ ದೇಶಗಳು ತಲೆ ಕೆಡಿಸಿಕೊಳ್ಳುತ್ತಿರುವಾಗ ಉಗ್ರ ಸಂಘಟನೆ ವಿರುದ್ಧ ಹೋರಾಡಲು ನಾನ್ ರೆಡಿ ಎಂದು ಹೇಳಿದ್ದಾನೆ.
24 ವರ್ಷದ ಸಜದ್ ಸಾಜದ್ ಗಾರಿಬಿ ದೇಹ ನೋಡಿದರೆ ಎಂತವರಿಗೂ ಗಾಬರಿ ಇಟ್ಟಿಸುತ್ತದೆ. ನಮ್ಮ ಪುಣ್ಯ ಪುರಾಣಗಳಲ್ಲಿ ಹೇಳುವಂತೆ ಭೀಮನನ್ನು ಅಜಾನುಬಾಹು ಎಂದು ಕರೆಯಲಾಗುತ್ತದೆ. ಭೀಮ ರಾಕ್ಷಸರನ್ನು ಕೊಂದು ಜನರಿಗೆ ಭಯದಿಂದ ಮುಕ್ತಿ ನೀಡಿದ್ದಂತೆ. ಸಾಜದ್ ಗಾರಿಬಿ ಸಹ ಇಸಿಸ್ ನಂತಹ ರಕ್ತ ಪಿಪಾಸುಗಳ ಹೋರಾಡಲು ಉತ್ಸುಕನಾಗಿದ್ದಾನೆ. ಈ ನಿಟ್ಟಿನಲ್ಲಿ ಇರಾನ್ ಸೇನೆ ಸೇರ್ಪಡೆಗೊಳ್ಳಲು ತಪಿಸುತ್ತಿದ್ದಾನೆ. ಈ ಕುರಿತು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಗ್ರಾಮ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ.
ಸಾಜದ್ ಗಾರಿಬಿ ಸುಮಾರಿ 175 ಕೆಚಿ ತೂಕವಿದ್ದಾನೆ. ಸ್ನಾಯುಬಲ ಹೊಂದಿರುವ ಇತ ನೋಡಲು ನಿಜವಾದ ಹಲ್ಕ್ ತರಹ ಕಾಣುತ್ತಾನೆ.