ಸೇನೆ ಕಣ್ತಪ್ಪಿಸಲು ಉಗ್ರರಿಂದ ಹೊಸ ತಂತ್ರ: 'ಕ್ಯಾಲ್ಕುಲೇಟರ್' ಮೊಬೈಲ್ ಆ್ಯಪ್ ಬಳಕೆ

ಜಮ್ಮು ಕಾಶ್ಮೀರಕ್ಕೆ ನುಸುಳಿರುವ ಉಗ್ರರು ಭಾರತೀಯ ಸೇನೆ ಕಣ್ತಪ್ಪಿಸಲು ಕ್ಯಾಲ್ಕಲೇಟರ್ ಮೊಬೈಲ್ ಆ್ಯಪ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ನುಸುಳಿರುವ ಉಗ್ರರು ಭಾರತೀಯ ಸೇನೆ ಕಣ್ತಪ್ಪಿಸಲು ಕ್ಯಾಲ್ಕಲೇಟರ್ ಮೊಬೈಲ್ ಆ್ಯಪ್ ಬಳಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಪಾಕಿಸ್ತಾನ ಮೂಲದ ಉಗ್ರರು ಕಾಶ್ಮೀರದೊಳಗೆ ನುಸುಳಿದ್ದು, 24 ಗಂಟೆಗಳಲ್ಲಿ ಎರಡು ಕಡೆ ದಾಳಿ ಮಾಡಿ ಯೋಧರು ಮತ್ತು ಪೊಲೀಸರನ್ನು ಹತ್ಯೆ ಮಾಡಿದ್ದರು. ಈ ಉಗ್ರರು ತಮ್ಮ ನಾಯಕರ ಜೊತೆ ಸಂಪರ್ಕದಲ್ಲಿರಲು ಕ್ಯಾಲ್ಕುಲೇಟರ್ ಎಂಬ ಮೊಬೈಲ್ ಆ್ಯಪ್ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. 
ಉಗ್ರರು ಬಳಸುವ ಮೊಬೈಲ್ ಮತ್ತು ವೈರ್ ಲೆಸ್ ಸಾಧನ ಮೂಲಕ ಅವರನ್ನು ಸೇನೆ ಪತ್ತೆ ಹಚ್ಚುತ್ತಿತ್ತು. ಆದರೆ, ಈ ಬಾರಿ ಸೇನೆ ಕಣ್ಣಿಗೆ ಮಣ್ಣೆರಚಲು ಉಗ್ರರು ಕ್ಯಾಲ್ಕುಲೇಟರ್ ಮೊಬೈಲ್ ಆ್ಯಪ್ ನ್ನು ಬಳಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಉಗ್ರರನ್ನು ಪತ್ತೆ ಹಚ್ಚಲು ಸೇನೆಗೆ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ. 
ಕ್ಯಾಲ್ಕುಲೇಟರ್ ಮೊಬೈಲ್ ಎಂಬ ಹೊಸ ಆ್ಯಪ್ ಮೂಲಕ ಉಗ್ರರ ಚಲನವಲನ ಪತ್ತೆ ಹಚ್ಚಲು ಹೆಣಗಾಡುವ ಸ್ಥಿತಿ ಎದುರಾಗಿದೆ. ಹಾಗಾಗಿ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ(ಎನ್ ಟಿಆರ್ ಒ)ಸಿಬ್ಬಂದಿ ಹಾಗೂ ಇತರ ಕೆಲವು ಸಂಸ್ಥೆಗಳು ಈ ಸೇನೆಗೆ ನೆರವಾಗಿದ್ದಾರೆ ಎಂದು ಮೂಲಗಳು ಹೇಳಿವೆ. 
ಭಯೋತ್ಪಾದಕರು ಕ್ಯಾಲ್ಕುಲೇಟರ್ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ ಫೋನ್ ಗಳ ಮೂಲಕ ಇದನ್ನು ಬಳಸಿಕೊಳ್ಳಬಹುದು. ಈ ಮೊದಲು ಅಮೆರಿಕಾಗೆ ಕತ್ರಿನಾ ಚಂಡಮಾರುತ ಅಪ್ಪಳಿಸಿದಾಗ ಆಪ್ತರ ಜೊತೆ ಸಂಪರ್ಕದಲ್ಲಿರಲು ಅಲ್ಲಿನ ಜನ ಈ ಮಾದರಿಯ ಆ್ಯಪ್ ಅಭಿವೃದ್ಧಿ ಪಡಿಸಿದ್ದರು. ಅದೇ ಮಾದರಿಯ ಆ್ಯಪ್ ಅಭಿವೃದ್ಧಿ ಪಡಿಸಿರುವ ಉಗ್ರರು ತುಸು ಬದಲಾವಣೆ ತಂದಿದ್ದಾರೆನ್ನಲಾಗುತ್ತಿದೆ. 
ಈ ಆ್ಯಪ್ ಮೂಲಕ ನೆಟ್ ವರ್ಕ್ ಇಲ್ಲದೆಯೂ ಎಸ್ಎಂಎಸ್ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅಲ್ಲದೇ ತಾವು ಎಲ್ಲಿದ್ದೇವೆ ಎನ್ನುವುದು ಇನ್ನೊಬ್ಬರಿಗೆ ತಿಳಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com