ಡೊನಾಲ್ಡ್ ಟ್ರಂಪ್ ಕೊಲೆ ಯತ್ನ: ಯುವಕನ ಬಂಧನ

ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಆರೋಪದಲ್ಲಿ 19 ವರ್ಷದ ಬ್ರಿಟಿಷ್ ಯುವಕನನ್ನು ಬಂಧಿಸಲಾಗಿದೆ....
ಕೊಲೆ ಯತ್ನ ಆರೋಪದಲ್ಲಿ ಬಂಧಿತ ಯುವಕ
ಕೊಲೆ ಯತ್ನ ಆರೋಪದಲ್ಲಿ ಬಂಧಿತ ಯುವಕ
Updated on: 

ಲಾಸ್ ಏಂಜಲೀಸ್: ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಆರೋಪದಲ್ಲಿ 19 ವರ್ಷದ ಬ್ರಿಟಿಷ್ ಯುವಕನನ್ನು ಬಂಧಿಸಲಾಗಿದೆ.

ಲಾಸ್ ಏಂಜಲೀಸ್ ನ ಫೆಡರಲ್ ಕೋರ್ಟ್ ನಲ್ಲಿ ದಾಖಲಿಸಲಾದ ದೂರಿನನ್ವಯ ಟ್ರಂಪ್ ಅವರ ಕಾರ್ಯಕ್ರಮ ನಡೆಯಲಿದ್ದ ಕ್ಯಾಸಿನೋದ ಮಿಸ್ಟೆರಿ ಥಿಯೇಟರ್ ಬಳಿ ಮೈಕೆಲ್ ಸ್ಯಾಂಡ್ ಫೋರ್ಡ್ ಎಂಬಾತ ಪೊಲೀಸ್ ಅಧಿಕಾರಿಯೊಬ್ಬರ ಗನ್ ಅನ್ನು ಎಳೆದುಕೊಳ್ಳಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ಕ್ಯಾಲಿಫೋರ್ನಿಯಾದಿಂದ ಲಾಸ್ ವೆಗಾಸ್ ಗೆ ಟ್ರಂಪ್ ಹತ್ಯೆ ನಡೆಸಲು ಬಂದಿದ್ದಾಗಿ ಯುವಕ ಗುಪ್ತಚರ ಇಲಾಖೆ ಅಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ತಾನು ಈ ಹಿಂದೆ ಯಾವತ್ತೂ ಗನ್ ಬಳಸಿದ ಅನುಭವವಿಲ್ಲವಾದ್ದರಿಂದ ಕಾರ್ಯಕ್ರಮಕ್ಕೂ ಮುನ್ನ ಒಂದು ದಿನ ಮುಂಚಿತವಾಗಿ ಬಂದು ಶೂಟಿಂಗ್ ಅಭ್ಯಾಸಕ್ಕಾಗಿ ಬಂದೂಕು ಕದಿಯಲು ಯತ್ನಿಸಿದ್ದಾಗಿ  ಆತ ತಿಳಿಸಿದ್ದಾನೆಂದು ಹೇಳಲಾಗಿದೆ.

ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆತ ಟಿಕೆಟ್ ಖರೀದಿಸಿದ್ದ ಎನ್ನಲಾಗಿದ್ದು, ಇಂಗ್ಲೆಂಡ್ ಮೂಲದ ಈಗ ಕಳೆದ 18 ತಿಂಗಳಿಂದ ಅಮೆರಿಕಾದಲ್ಲಿ ವಾಸಿಸುತ್ತಿದ್ದಾನೆ.

ಪೊಲೀಸ್ ಅಧಿಕಾರಿ  ಅಮೀಲ್ ಜಾಕೋಬ್ ಎಂಬುವರ ಬಂದೂಕನ್ನು ಕಸಿಯಲು ಯತ್ನಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com