ಸಿಯೋಲ್ ನಲ್ಲಿ ಭಾರತದ ಅರ್ಜಿ ಪರಿಗಣನೆ; ಸದಸ್ಯ ರಾಷ್ಟ್ರಗಳ ಬೆಂಬಲ ಕೋರಿದ ದೊಡ್ಡಣ್ಣ

ಎನ್ ಎಸ್ ಜಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಂಪೂರ್ಣ ಬೆಂಬಲ ನೀಡಿರುವ ಅಮೆರಿಕ, ಚೀನಾದ ವಿರೋಧದ ಹೊರತಾಗಿಯೂ ಸಿಯೋಲ್ ಅಧಿವೇಶನದಲ್ಲಿ ಅರ್ಜಿ ಪರಿಗಣಿಸುವುದಾಗಿ ಹೇಳಿದೆ.
ಶ್ವೇತಭವನದ ಮಾಧ್ಯಮ ಕಾರ್ಯದಶಿ೯ ಜಾಶ್ ಅನೆ೯ಸ್ಟ್ (ಸಂಗ್ರಹ ಚಿತ್ರ)
ಶ್ವೇತಭವನದ ಮಾಧ್ಯಮ ಕಾರ್ಯದಶಿ೯ ಜಾಶ್ ಅನೆ೯ಸ್ಟ್ (ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಬಹು ನಿರೀಕ್ಷಕ್ಷಿತ ಭಾರತ ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಂಪೂರ್ಣ ಬೆಂಬಲ ನೀಡಿರುವ ಅಮೆರಿಕ, ಚೀನಾದ ವಿರೋಧದ  ಹೊರತಾಗಿಯೂ ಸಿಯೋಲ್ ಅಧಿವೇಶನದಲ್ಲಿ ಅರ್ಜಿ ಪರಿಗಣಿಸುವುದಾಗಿ ಹೇಳಿದೆ.

ಈ ಹಿಂದೆ ಇದೇ ವಿಚಾರಕ್ಕೆ ಸ್ಪಂಧಿಸಿದ್ದ ಚೀನಾ ಸಿಯೋಲ್ ಅಧಿವೇಶನದಲ್ಲಿ ಭಾರತದ ಎನ್ ಎಸ್ ಜಿ ಸೇರ್ಪಡೆ ವಿಚಾರ ಪ್ರಮುಖ ವಿಷಯವಾಗಿರುವುದಿಲ್ಲ ಎಂದು ಹೇಳುವ ಮೂಲಕ ಭಾರತದ  ದಶಕಗಳ ಕನಸಿದೆ ತಣ್ಣೀರೆರಚುವ ಪ್ರಯತ್ನ ಮಾಡುವ ಕುರಿತು ಪರೋಕ್ಷ ಮುನ್ಸೂಚನೆ ನೀಡಿತ್ತು. ಆದರೆ ಇದೀಗ ಚೀನಾಕ್ಕೆ ಪ್ರಬಲ ತಿರುಗೇಟು ನೀಡಿರುವ ಅಮೆರಿಕ ಸಿಯೋಲ್ ಅಧಿವೇಶನದಲ್ಲಿ  ಭಾರತದ ಅರ್ಜಿಯನ್ನು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಅಷ್ಟು ಮಾತ್ರವಲ್ಲದೇ ಭಾರತ ಎನ್ ಎಸ್ ಜಿ ಸೇರ್ಪಡೆ ವಿಚಾರಕ್ಕೆ ಸದಸ್ಯ ರಾಷ್ಟ್ರಗಳು ಬೆಂಬಲಿಸಬೇಕು ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಮಂಗಳವಾರ ಮಾತನಾಡಿರುವ ಶ್ವೇತಭವನದ  ಮಾಧ್ಯಮ ಕಾರ್ಯದಶಿ೯ ಜಾಶ್ ಅನೆ೯ಸ್ಟ್ ಅವರು, ಭಾರತದ ಎನ್ ಎಸ್ ಜಿ ಸೇರ್ಪಡೆ ಅಮೆರಿಕದ ಸಂಪೂರ್ಣ ಬೆಂಬಲವಿದೆ. ಈ ವಿಚಾರದಲ್ಲಿ ಅಮೆರಿಕ ನೀತಿಯೂ ಭಾರತಕ್ಕೆ ನೆರವಾಗಲಿದ್ದು,  ಸಿಯೋಲ್‍ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾರತದ ಅಜಿ೯ ಪರಿಗಣಿಸಲಾಗುವುದು ಎ೦ದು ಹೇಳಿದ್ದಾರೆ. ಅಂತೆಯೇ ಕೆಲವು ವಿಚಾರಗಳ ಬಗ್ಗೆ ಸದಸ್ಯರಾಷ್ಟ್ರಗಳ ನಡುವೆ ಗೊ೦ದಲಗಳಿದ್ದು,  ಮಾತುಕತೆ ಮೂಲಕ ಬಗೆಹರಿಯುವ ವಿಶ್ವಾಸವಿದೆ. ಭಾರತದ ಪರ ಅಮೆರಿಕ ಮು೦ದಾಳತ್ವ ವಹಿಸಲಿದೆ ಎ೦ದು ಅವರು ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ-ಜಿನ್‍ಪಿ೦ಗ್ ಚರ್ಚೆ
ಇದೇ ವೇಳೆ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ನಡೆಯುತ್ತಿರುವ ಐದು ದಿನಗಳ ಎನ್‍ಎಸ್‍ಜಿ ಸಭೆ ಜೂನ್ 24ಕ್ಕೆ ಕೊನೆಗೊಳ್ಳಲಿದ್ದು, ಜೂನ್ 23ರ೦ದು ಉಜ್ಜೇಕಿಸ್ತಾನದ  ತಾಷ್ಕೆಂಟ್‍ನಲ್ಲಿ ಶಾ೦ಘೈ ಸಹಕಾರ ಸಮಾವೇಶದಲ್ಲಿ ಪ್ರಧಾನಿ ನರೇ೦ದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿ೦ಗ್ ಕೂಡ ಭಾಗವಹಿಸಲಿದ್ದಾರೆ. ಈ ವೇಳೆ ಜಿನ್‍ಪಿ೦ಗ್- ಮೋದಿ ಪರಸ್ಪರ  ಮಾತುಕತೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಚೀನಾದ ಬೆ೦ಬಲ ಕೋರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com